ADVERTISEMENT

ಹೆಚ್ಚು ಅನುದಾನಕ್ಕೆ ನಿತೀಶ್‌ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2015, 19:30 IST
Last Updated 26 ಮಾರ್ಚ್ 2015, 19:30 IST

ನವದೆಹಲಿ (ಪಿಟಿಐ): ಬಿಹಾರ ಮುಖ್ಯ ಮಂತ್ರಿ ನಿತೀಶ್‌ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರುವಾರ ಭೇಟಿ ಮಾಡಿದರು.
ಬಿಜೆಪಿ ಜತೆಗಿನ 17 ವರ್ಷಗಳ ಮೈತ್ರಿ ಯನ್ನು ಮುರಿದುಕೊಂಡ 2  ವರ್ಷಗಳ ನಂತರ ನಿತೀಶ್‌ ಅವರ ಮೊದಲ ಭೇಟಿ ಇದಾಗಿದೆ.  ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿದ  ಬೆಳವಣಿಗೆ ಗಳ ನಂತರ ನಿತೀಶ್‌ ಬಿಜೆಪಿ ಜತೆಗಿನ ಸಖ್ಯ ತೊರೆದಿದ್ದರು.

ರಾಜ್ಯಕ್ಕೆ ಸಂಬಂಧಿಸಿದ ಹಣಕಾಸು ವಿಷಯಗಳನ್ನು ವಿಶೇಷವಾಗಿ  14ನೇ ಹಣ ಕಾಸು ಆಯೋಗದ ಶಿಫಾರಸುಗಳ ಅನು ಷ್ಠಾನದಿಂದ ರಾಜ್ಯಕ್ಕೆ ₨50 ಸಾವಿರ ಕೋಟಿ ನಷ್ಟವಾಗಲಿರುವ ಬಗ್ಗೆ ಪ್ರಧಾನಿ ಅವರಿಗೆ  ಮನವರಿಕೆ ಮಾಡಿ ಕೊಟ್ಟಿರುವುದಾಗಿ  ನಿತೀಶ್‌ ಹೇಳಿದರು.

2000ರಲ್ಲಿ ರಾಜ್ಯ ವಿಭಜನೆ ನಂತರ ಹಿಂದುಳಿದ ಪ್ರಾಂತ್ಯಗಳ ಅನುದಾನದಡಿ ಬಿಹಾರಕ್ಕೆ ವಿಶೇಷ ಅನುದಾನ ನೀಡುವ ಬಗ್ಗೆ ಪ್ರಧಾನಿ ಅವರೊಂದಿಗೆ ಚರ್ಚೆ ನಡೆಸಿದ್ದಾಗಿ ನಿತೀಶ್‌ ಹೇಳಿದರು.

‘ನಮ್ಮ ಅನುಮಾನಗಳನ್ನು ಪರಿಹರಿಸಿಕೊಂಡಿದ್ದೇವೆ. ನಮಗೆ ಹಣಕಾಸು ನೆರವು ಬೇಕಾಗಿದೆ. ಭವಿಷ್ಯದಲ್ಲಿ ಅದನ್ನೂ ಪಡೆಯಲಿದ್ದೇವೆ’  ಎಂದು ವಿವರಿಸಿದರು.
‘ಇದೊಂದು ಸೌಜನ್ಯದ ಭೇಟಿ ಆಗಿತ್ತು’ ಎಂದು ಪ್ರಧಾನಿಗಳ ಸಚಿವಾಲಯ ಹೇಳಿದೆ.

ನಿತೀಶ್‌ ಹಾಗೂ ಮೋದಿ ಅವರ ಪಕ್ಷಗಳು ಮೈತ್ರಿ ಹೊಂದಿದ್ದಾಗಲೂ ಇವರಿಬ್ಬರ ಸಂಬಂಧ  ಉತ್ತಮವಾಗಿ ರಲಿಲ್ಲ. ಮೋದಿ ಅವರ ಜತೆ                   ನಿತೀಶ್‌ ವೇದಿಕೆ ಹಂಚಿಕೊಳ್ಳಲು ನಿರಾಕರಿ ಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.