ಚಂಡೀಗಡ (ಪಿಟಿಐ): ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಧ್ವನಿ ಎತ್ತಿ ಇಂತಹ ಕ್ರೂರತನವನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮ ಕೈಗೊಳ್ಳುವ ಗ್ರಾಮಗಳಿಗೆ ರೂ 1 ಕೋಟಿ ನೀಡುವುದಾಗಿ ಹರಿಯಾಣ ಸರ್ಕಾರ ಘೋಷಿಸಿದೆ.
ಖಾಪ್ (ಸಮುದಾಯಗಳ) ಪಂಚಾಯತ್‌ಗಳು ಹೆಣ್ಣು ಭ್ರೂಣ ಹತ್ಯೆಯನ್ನು `ಘೋರ ಕೃತ್ಯ~ ಎಂದು ಘೋಷಿಸಬೇಕು ಮತ್ತು ಇಂತಹ ಪಾತಕ ಕೃತ್ಯದಲ್ಲಿ ತೊಡಗುವವರ ವಿರುದ್ಧ ಕೊಲೆ ಮೊಕದ್ದಮೆ ಹೂಡುವಂತೆ ಪಂಚಾಯಿತಿಗಳೇ ಒತ್ತಾಯಿಸಬೇಕು.
ಅಂತಹ ಗ್ರಾಮಗಳ ಅಭಿವೃದ್ಧಿಗೆ ಒಂದು ಕೋಟಿ ರೂಪಾಯಿ ಇನಾಮು ನೀಡುವುದಾಗಿ ಹರಿಯಾಣದ ಮುಖ್ಯಮಂತ್ರಿ ಭೂಪಿಂದರ್‌ಸಿಂಗ್ ಹೂಡಾ ಹೇಳಿದ್ದಾರೆ.ಜಿಂದ್ ಜಿಲ್ಲೆಯ ಬಿಬಿಪುರ್ ಗ್ರಾಮವು ಈ ಇನಾಮು ಪಡೆದ ಮೊದಲ ಹಳ್ಳಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.