ADVERTISEMENT

ಹೈಕೋರ್ಟ್ ಛೀಮಾರಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಹಿರಿಯ ಅಧಿಕಾರಿಯೊಬ್ಬರನ್ನು ನಿವೃತ್ತಿಯ ಬಳಿಕ ಒಂದು ರೂಪಾಯಿ ವೇತನದಂತೆ ದುಡಿಸಿಕೊಂಡ ದೆಹಲಿ ಸರ್ಕಾರದ  ನಡವಳಿಕೆಗೆ ದೆಹಲಿ ಹೈಕೋರ್ಟ್ ಸೋಮವಾರ ಛೀಮಾರಿ ಹಾಕಿದೆ.

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನಿರ್ದೇಶಕರಾದ ಜೆ. ಎಸ್. ಖಾತ್ರಿ ಅವರನ್ನು ನಿವೃತ್ತಿ ಬಳಿಕ ಒಂದು ರೂಪಾಯಿ ವೇತನಕ್ಕೆ ದುಡಿಸಿಕೊಂಡಿರುವುದು ಅತ್ಯಂತ ಹೀನಾಯ ಕೆಲಸ ಎಂದಿರುವ  ನ್ಯಾಯ ಪೀಠ, ಖಾತ್ರಿ, ಕೊನೆಯ ಬಾರಿ ಪಡೆದ ಮೂಲ ವೇತನದ ಅರ್ಧದಷ್ಟನ್ನು ನೀಡುವಂತೆ ಆದೇಶಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.