ADVERTISEMENT

ಹೊಸ ರೈಲ್ವೆ ಯೋಜನೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 19:30 IST
Last Updated 17 ಫೆಬ್ರುವರಿ 2012, 19:30 IST

ನವದೆಹಲಿ: ರಾಜ್ಯದಲ್ಲಿ 18 ಹೊಸ ರೈಲ್ವೆ ಮಾರ್ಗಗಳು ಒಳಗೊಂಡಂತೆ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಕಾರ್ಪೋರೇಟ್ ವ್ಯವಹಾರಗಳ ಸಚಿವ ಎಂ. ವೀರಪ್ಪ ಮೊಯಿಲಿ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರಿಗೆ ಮನವಿ ಮಾಡಿದ್ದಾರೆ.

ಪ್ರಸಕ್ತ ವರ್ಷ ಮಂಡನೆ ಆಗಲಿರುವ ರೈಲ್ವೆ ಬಜೆಟ್‌ನಲ್ಲಿ ಹೊಸ ರೈಲುಗಳು, ಹೊಸ ಮಾರ್ಗಗಳು ಸೇರಿದಂತೆ ಹಲವು ಯೋಜನೆ ಪ್ರಕಟಿಸಬೇಕೆಂದು ರೈಲ್ವೆ ಸಚಿವರಿಗೆ ಮೊಯಿಲಿ ಮನವಿ ಪತ್ರ ಸಲ್ಲಿಸಿದರು.

ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿ ಮಾರ್ಗವಾಗಿ ಪುಟ್ಟಪರ್ತಿಗೆ, ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು, ಯಲಹಂಕ- ಪೆನಗೊಂಡ, ಧಾರವಾಡದಿಂದ ಬೈಲಹೊಂಗಲ- ಬೆಳಗಾವಿ ಮಾರ್ಗಗಳನ್ನು ಪ್ರಕಟಿಸಲು ಕೋರಿದ್ದಾರೆ. ವಿಜಾಪುರದಿಂದ ಗದಗ ಮಾರ್ಗವಾಗಿ ಮಂಗಳೂರಿಗೆ, ಬೆಂಗಳೂರಿನಿಂದ ಗೋವಾಕ್ಕೆ ಮಂಗಳೂರು ಮಾರ್ಗವಾಗಿ ಹೊಸ ರೈಲು ಓಡಿಸುವಂತೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.