ADVERTISEMENT

‘ಅಗ್ನಿ 5’ ಕ್ಷಿಪಣಿ ಯಶಸ್ವಿ ಉಡಾವಣೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2013, 19:59 IST
Last Updated 15 ಸೆಪ್ಟೆಂಬರ್ 2013, 19:59 IST

ಬಾಲಸೋರ್ (ಒಡಿಶಾ) (ಪಿಟಿಐ): ಪರ­ಮಾಣು ಸಿಡಿತಲೆಗಳನ್ನು ಹೊತ್ತಯ್ಯಬಲ್ಲ ದೇಶೀಯವಾಗಿ ತಯಾರಿಸಿದ ‘ಅಗ್ನಿ–5’ ಕ್ಷಿಪಣಿಯ ಎರಡನೇ ಪರೀಕ್ಷಾರ್ಥ ಪ್ರಯೋಗ ಇಲ್ಲಿನ ಕಡಲತೀರಕ್ಕೆ ಹತ್ತಿರದಲ್ಲಿರುವ ದ್ವೀಪವೊಂದರಲ್ಲಿ ಭಾನುವಾರ ಯಶಸ್ವಿಯಾಗಿ ನಡೆಯಿತು.
5,000 ಕಿ.ಮೀ. ವ್ಯಾಪ್ತಿಯ ಶತ್ರು ನೆಲೆಗಳ ಮೇಲೆ  ದಾಳಿ ನಡೆಸಬಲ್ಲ ಕ್ಷಿಪಾಣಿ ಇದಾಗಿದೆ.

2012ರ 19ನೇ ಏಪ್ರಿಲ್‌ನಲ್ಲಿ ಅಗ್ನಿ ಕ್ಷಿಪಣಿಯ ಮೊದಲ ಪರೀಕ್ಷಾರ್ಥ ಉಡಾವಣೆ ನಡೆದಿತ್ತು. ಎರಡನೇ ಪರೀಕ್ಷಾರ್ಥ ಉಡಾವಣೆಯಲ್ಲೂ ಅಗ್ನಿ–5 ಯಶಸ್ವಿಯಾಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಎ(ಡಿಆರ್‌ಡಿಒ) ವಕ್ತಾರ ರವಿಕುಮಾರ್‌ ಗುಪ್ತಾ ತಿಳಿಸಿದ್ದಾರೆ.

ಅಗ್ನಿ–5 ಕ್ಷಿಪಣಿ ಒಂದು ಟನ್‌ಗಿಂತಲೂ ಹೆಚ್ಚು  ಭಾರದ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಇದು ಸ್ವಯಂಚಾಲಿತ ಸೌಲಭ್ಯವನ್ನೂ ಹೊಂದಿದೆ. ವಿವಿಧ ರೇಡಾರ್‌ ಮತ್ತು ಸಂಪರ್ಕ ವ್ಯವಸ್ಥೆಯ ಮೂಲಕವೂ ಮಾಹಿತಿ ಪಡೆಯುವ ವಿಶೇಷ ಗುಣ ಇದಕ್ಕಿದೆ ಎಂದು ಗುಪ್ತಾ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.