
ಪ್ರಜಾವಾಣಿ ವಾರ್ತೆಮುಂಬೈ (ಪಿಟಿಐ): ಭಾರತದ ‘ಆಧುನಿಕ ವಾಸ್ತುಶಿಲ್ಪಿ’ ಎಂದು ಹೆಸರಾಗಿದ್ದ ಚಾರ್ಲ್ಸ್ ಕೊರಿಯಾ (84) ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.
ಸ್ವಾತಂತ್ರ್ಯಾನಂತರದ ಭಾರತದಲ್ಲಿ ನಿರ್ಮಾಣಗೊಂಡ ಪ್ರಮುಖ ಕಟ್ಟಡ ಹಾಗೂ ಯೋಜನೆಗಳ ನೀಲನಕ್ಷೆ ತಯಾರಿಸಿದ ಹೆಗ್ಗಳಿಕೆ ಚಾರ್ಲ್ಸ್ ಅವರದ್ದಾಗಿತ್ತು.
ಅಹ್ಮದಾಬಾದ್‌ನ ಮಹಾತ್ಮ ಗಾಂಧಿ ಸ್ಮಾರಕ, ಮಧ್ಯಪ್ರದೇಶದ ವಿಧಾನಸಭಾ ಕಟ್ಟಡ ಸೇರಿದಂತೆ ಹಲವು ಪ್ರಮುಖ ಯೋಜನೆಗಳಿಗೆ ಚಾರ್ಲ್ಸ್ ವಾಸ್ತುಶಿಲ್ಪಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.