ADVERTISEMENT

‘ನಾಟಕದಲ್ಲಿ ನಂಬಿಕೆಯಿಲ್ಲ, ಆಡಳಿತದಲ್ಲಿ ನಂಬಿಕೆಯಿದೆ’

​ಪ್ರಜಾವಾಣಿ ವಾರ್ತೆ
Published 23 ಮೇ 2015, 16:02 IST
Last Updated 23 ಮೇ 2015, 16:02 IST

ನವದೆಹಲಿ (ಪಿಟಿಐ): ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್‌ ಜಂಗ್‌ ಜತೆಗಿನ ಜಟಾಪಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ದ ಕೇಂದ್ರ ಸಚಿವರು ಶನಿವಾರ ವಾಗ್ದಾಳಿ ನಡೆಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಕೇವಲ ನಾಟಕ ಆಡೋದು ಬೇಕು. ಆದರೆ ಎನ್‌ಡಿಎ ಸರ್ಕಾರ ಆಡಳಿತದಲ್ಲಿ ನಂಬಿಕೆ ಇಡುತ್ತದೆ ಎಂದು ಕೇಂದ್ರ ಸಚಿವ ಕಿರಣ್‌ ರಿಜಿಜು ಅವರು ಕಟುಕಿಯಾಡಿದ್ದಾರೆ.

ಕಾರ್ಯಕ್ರಮವೊಂದರ ಅಂಗವಾಗಿ ಇಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಕೇವಲ ನಾಟಕವಾಡಲು ಬಯಸುವ ಕೇಜ್ರಿವಾಲ್‌, ಪ್ರತಿಕ್ರಿಯೆಗೆ ಅರ್ಹರಲ್ಲ. ನಮಗೆ ನಾಟಕದಲ್ಲಿ ನಂಬಿಕೆಯಿಲ್ಲ. ಆಡಳಿತದಲ್ಲಿ ನಂಬಿಕೆ ಇದೆ’ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ರಿಜಿಜು ನುಡಿದಿದ್ದಾರೆ.

ADVERTISEMENT

ಅಧಿಕಾರಿಗಳ ನೇಮಕ ಹಾಗೂ ವರ್ಗಾವಣೆ ಸಂಬಂಧ ಕೇಜ್ರಿವಾಲ್ ಹಾಗೂ ಜಂಗ್ ಅವರ ನಡುವೆ ಕಳೆದೊಂದು ವಾರದಿಂದ ಭಿನ್ನಭಿಪ್ರಾಯ ಮೂಡಿತ್ತು. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರೂ ಎಎಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

‘ಕಳೆದ ಕೆಲ ತಿಂಗಳಿನಿಂದ ದೆಹಲಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ಮುಂದಿನ ದಿನಗಳು ಇನ್ನೂ ದುಸ್ತರವಾಗುವಂತೆ ಗೋಚರಿಸುತ್ತಿದೆ. ಎಎಪಿ ಅಭೂತಪೂರ್ವ ಬಹುಮತ ಪಡೆದು ಅಧಿಕಾರಕ್ಕೆ ಬಂದಿತ್ತು. ಅವರು ತಮ್ಮ ಜವಾಬ್ದಾರಿಗಳನ್ನು ಅರ್ಥೈಸಿಕೊಳ್ಳಬೇಕು. ಜನತೆಗೆ ಕಿತ್ತಾಟ ಬೇಕಿಲ್ಲ. ಅವರಿಗೆ ಆಡಳಿತ ಬೇಕು. ಅವರು ತಮ್ಮ ಹೊಣೆಗಾರಿಕೆಯನ್ನು ಅರಿತು ಜನತೆಯ ನಿರೀಕ್ಷೆಗಳನ್ನು ಈಡೇರಿಸಬೇಕು’ ಎಂದು ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.