ADVERTISEMENT

‘ಮೋದಿ ಪಶ್ಚಾತ್ತಾಪಕ್ಕೆ ಅವಕಾಶ ನೀಡಿ’

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 19:30 IST
Last Updated 14 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಪಶ್ಚಾತ್ತಾಪ ಪಡಲು ಅವಕಾಶ ನೀಡದಿದ್ದರೆ ಗೋಧ್ರಾ ಪ್ರಕರಣದ ನಂತರದ ಗಲಭೆಗಳ ಬಗೆಗಿನ ಚರ್ಚೆಗೆ ಅಂತ್ಯವೆಂಬುದೇ ಇರುವುದಿಲ್ಲ ಎಂದು ಇನ್ಫೊಸಿಸ್‌ ಮುಖ್ಯಸ್ಥ ಎನ್‌.ಆರ್‌.ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

‘ಯಾವುದೇ ಪಕ್ಷದ ಯಾವ ವ್ಯಕ್ತಿ ತಪ್‍ಪು ಎಸಗಿದ್ದರೆ ತನ್ನಿಂದ ತಪ್ಪಾಗಿದೆ ಎಂದು ಸಂಬಂಧಿಸಿದ ವ್ಯಕ್ತಿ ಒಪ್ಪಿ­ಕೊಳ್ಳದ ಹೊರತು ಆ ಚರ್ಚೆ ಕೊನೆ­ಯಾಗುವುದೇ ಇಲ್ಲ’ ಎಂದು ಮೂರ್ತಿ ಅವರು ಖಾಸಗಿ ವಾಹಿನಿಯ ಕಾರ್ಯಕ್ರಮ­ವೊಂದರಲ್ಲಿ ಹೇಳಿದರು.

ಮೋದಿ ಅವರ ಹೆಸರನ್ನಾಗಲೀ ಅಥವಾ ಗೋಧ್ರಾ ಗಲಭೆಗಳ ಬಗ್ಗೆಯಾಗಲೀ ನೇರವಾಗಿ ಪ್ರಸ್ತಾಪ ಮಾಡಲಿಲ್ಲ. ಆದರೆ, ನಂತರ ಸುದ್ದಿಗಾರರು ತಾವು ನರೇಂದ್ರ ಮೋದಿ ಅವರನ್ನು ಕುರಿತು ಹೀಗೆ ಹೇಳುತ್ತಿದ್ದೀರಾ ಎಂದು ಕೇಳಿದಾಗ, ‘ಹೌದು’ ಎಂದು ತಲೆ ಆಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.