ADVERTISEMENT

ಬಾಂಬ್ ಸ್ಫೋಟ ಹೇಯ ಕೃತ್ಯ-ಮಾಜಿ ಪ್ರಧಾನಿ ದೇವೇಗೌಡ ಖಂಡನೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 13:01 IST
Last Updated 22 ಏಪ್ರಿಲ್ 2019, 13:01 IST
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ   

ಬೆಂಗಳೂರು:ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಹೇಯಕೃತ್ಯ, ಇಂತಹ ಘಟನೆಗಳ ನಿಲ್ಲಿಸಲು ಒಗ್ಗಟ್ಟಿನ ಹೋರಾಟ ಅಗತ್ಯ ಎಂದುಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.

ಪದ್ಮನಾಭನಗರದಲ್ಲಿ ಈ ಹೇಳಿಕೆ ನೀಡಿದ ದೇವೇಗೌಡರು, ಸ್ಫೋಟವನ್ನು ಖಂಡಿಸಿದ್ದು, ಇದು ಶಾಂತಿ ನೆಮ್ಮದಿ ಹಾಳು ಮಾಡುವ ಕೆಲಸವಾಗಿದೆ.

ಈ ಹೇಯ ಕೃತ್ಯ ನಿಲ್ಲುಸುವವರೆಗೆ ಜಗತ್ತಿಗೆ ಶಾಂತಿ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಇಂತಹ ಕೃತ್ಯಗಳ ವಿರುಧ್ಧ ಹೋರಾಡಬೇಕಿದೆ.ಎಲ್ಲ ಕಡೆ ಇಂತಹ ಕೃತ್ಯಗಳು ನಡೆಯುತ್ತಿವೆ. ಸಂತ್ರಸ್ತರಿಗೆ ನಮ್ಮ ದೇಶ ಕೂಡಾ ನೆರವು ನೀಡಬೇಕು.ಸಾವಿಗೀಡಾದವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ದೆವರು ನೀಡಲಿ.ಇತ್ತೀಚಿಗೆ ಪ್ರವಾಸಕ್ಕೆ ಅಂತಾ ಜನ ಶ್ರೀಲಂಕಾಗೆ ಹೆಚ್ಚು ಹೋಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

ಸಚಿವೆ ಸುಷ್ಮಾಗೆ ದೇವೇಗೌಡ ಕರೆ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌‌ಗೆ ದೂರವಾಣಿ ಕರೆ ಮಾಡಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರುಘಟನೆ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.ಕರೆ ಮಾಡಿದ ಸಂದರ್ಭದಲ್ಲಿಶ್ರೀಲಂಕಾದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಮುಂದಾಗಲು ಮನವಿ ಮಾಡಿದ್ದಾರೆ.ಗೌಡರ ಮಾತಿಗೆ ಸ್ಪಂದಿಸಿದ ಸುಷ್ಮಾ ಸ್ವರಾಜ್. ಕೂಡಲೆ ಅಗತ್ಯ ಕ್ರಮ ಕೈಗೊಳ್ಳುವ ಅಭಯ ನೀಡಿದ್ದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.