ADVERTISEMENT

1 ಕೋಟಿ ಮೀರಿದ ಮೋದಿ ಇನ್‌ಸ್ಟಾಗ್ರಾಮ್ ಬೆಂಬಲಿಗರ ಸಂಖ್ಯೆ

ಎರಡನೇ ಸ್ಥಾನದಲ್ಲಿ ಟ್ರಂಪ್

ಏಜೆನ್ಸೀಸ್
Published 25 ಅಕ್ಟೋಬರ್ 2017, 9:42 IST
Last Updated 25 ಅಕ್ಟೋಬರ್ 2017, 9:42 IST
1 ಕೋಟಿ ಮೀರಿದ ಮೋದಿ ಇನ್‌ಸ್ಟಾಗ್ರಾಮ್ ಬೆಂಬಲಿಗರ ಸಂಖ್ಯೆ
1 ಕೋಟಿ ಮೀರಿದ ಮೋದಿ ಇನ್‌ಸ್ಟಾಗ್ರಾಮ್ ಬೆಂಬಲಿಗರ ಸಂಖ್ಯೆ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಇನ್‌ಸ್ಟಾಗ್ರಾಮ್‌ ಖಾತೆಯ ಬೆಂಬಲಿಗರ (ಫಾಲೋವರ್ಸ್‌) ಸಂಖ್ಯೆ 1 ಕೋಟಿ ಮೀರಿದೆ.

ಈ ಮೂಲಕ ಮೊದಲ ಸ್ಥಾನ ಪಡೆದುಕೊಂಡ ನರೇಂದ್ರ ಮೋದಿ ಅವರು, ಹೆಚ್ಚು ಬೆಂಬಲಿಗರನ್ನು ಹೊಂದಿರುವ ಜಾಗತಿಕ ನಾಯಕ ಎಂದೆನಿಸಿಕೊಂಡಿದ್ದಾರೆ.

ಮೋದಿ ಇನ್‌ಸ್ಟಾಗ್ರಾಮ್‌ ಯಾರನ್ನೂ ಫಾಲೋ ಮಾಡುತ್ತಿಲ್ಲ. ಇದುವರೆಗೆ ವಿದೇಶ ಪ್ರವಾಸ, ಸಭೆ, ರಾಜಕೀಯ ಮುಖಂಡರ ಭೇಟಿ ಹೀಗೆ 150ಕ್ಕೂ ಹೆಚ್ಚು ಚಿತ್ರ ಹಾಗೂ ವಿಡಿಯೊಗಳು ಮೋದಿ ಇನ್‌ಸ್ಟಾಗ್ರಾಮ್‌ ಖಾತೆಯಿಂದ ಪೋಸ್ಟ್‌ ಆಗಿವೆ.

ADVERTISEMENT

ನವೆಂಬರ್ 12, 2014ರಲ್ಲಿ ಇನ್‌ಸ್ಟಾಗ್ರಾಮ್ ಖಾತೆ ತೆರೆದ ಮೋದಿ ಅವರು, ಮ್ಯಾನ್ಮಾರ್‌ನಲ್ಲಿ ನಡೆದ 25ನೇ ಏಷಿಯನ್ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಚಿತ್ರವನ್ನು ಮೊದಲ ಭಾರಿ ಅಪ್‌ಲೋಡ್ ಮಾಡಿದ್ದರು.

ಕಳೆದ ವಾರ ಕೇದರಾನಾಥ್‌ಗೆ ಭೇಟಿ ನೀಡಿದ ಫೋಟೊವನ್ನು ಅಪ್‌ಲೋಡ್ ಮಾಡಿದ್ದು, 7 ಲಕ್ಷ 78ಸಾವಿರಕ್ಕೂ ಹೆಚ್ಚು ಲೈಕ್ ಸಿಕ್ಕಿದ್ದು, 4 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.