ADVERTISEMENT

`100 ಕೋಟಿ ತೆರಿಗೆ ವಂಚನೆ!

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2013, 19:59 IST
Last Updated 22 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ಮುಂಬೈ ಮೂಲದ ಪವನ ವಿದ್ಯುತ್‌ ಉತ್ಪಾದನೆ ಮತ್ತು ಯಂತ್ರಗಳ ಸರಬರಾಜು ಕಂಪೆನಿಯೊಂದು  ಸರ್ಕಾರಕ್ಕೆ ಸುಮಾರು ನೂರು ಕೋಟಿ ರೂಪಾಯಿ ಸೇವಾ ತೆರಿಗೆಯನ್ನು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ತಮಗೆ ದೊರೆತ ಖಚಿತ ಸುಳಿವಿನ ಮೇಲೆ ಕೇಂದ್ರ ಅಬಕಾರಿ ಜಾಗೃತದಳದ ಅಧಿಕಾರಿಗಳು  ಮುಂಬೈ ಸೇರಿದಂತೆ ದೇಶದ ವಿವಿಧೆಡೆ ಇರುವ ಕಂಪೆನಿಯ ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ಏಪ್ರಿಲ್‌ 2012ರಿಂದ ಮೇ 2013ರವರೆಗಿನ ಅವಧಿಯಲ್ಲಿ ಗಾಳಿ ಯಂತ್ರ ಪೂರೈಸಿದ ಗ್ರಾಹಕ ಸಂಸ್ಥೆಗಳಿಂದ ಸಂಪೂರ್ಣ ಸೇವಾ ತೆರಿಗೆ ಸಂಗ್ರಹಿ ಸಿದ್ದರೂ ಅದನ್ನು ಸರ್ಕಾರಕ್ಕೆ ಪಾವತಿಸಿರಲಿಲ್ಲ ಎನ್ನಲಾಗಿದೆ.ಕರ್ನಾಟಕ, ಮಹಾರಾಷ್ಟ್ರ, ತಮಿಳು ನಾಡು, ಆಂಧ್ರಗಳಲ್ಲಿ ಈ ಕಂಪೆ ನಿಯ ಗಾಳಿ ವಿದ್ಯುತ್‌ ಉತ್ಪಾದನಾ ಘಟಕಗಳಿರು­ವುದು ದಾಳಿಯ ವೇಳೆ ವಶಪಡಿಸಿಕೊಂಡ ದಾಖಲೆಗಳಿಂದ ಬಹಿರಂಗವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.