ADVERTISEMENT

ದೇಶದ 75 ರೈಲು ನಿಲ್ದಾಣಗಳಲ್ಲಿ 100 ಅಡಿ ಎತ್ತರದ ಧ್ವಜಸ್ತಂಭ ಸ್ಥಾಪನೆಗೆ ನಿರ್ಧಾರ

ಏಜೆನ್ಸೀಸ್
Published 15 ನವೆಂಬರ್ 2018, 1:51 IST
Last Updated 15 ನವೆಂಬರ್ 2018, 1:51 IST
   

ಮುಂಬೈ: ಮುಂಬೈನ ಏಳು ರೈಲು ನಿಲ್ದಾಣಗಳು ಸೇರಿದಂತೆ ದೇಶದಾದ್ಯಂತ ಹೆಚ್ಚಿನ ಜನದಟ್ಟಣೆ ಇರುವ ಒಟ್ಟು 75 ರೈಲು ನಿಲ್ದಾಣಗಳಲ್ಲಿ 100 ಅಡಿ ಎತ್ತರದ ತ್ರಿವರ್ಣ ಧ್ವಜಸ್ತಂಭಗಳನ್ನು ಸ್ಥಾಪಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಈ ಸಂಬಂಧ ಅಕ‌್ಟೋಬರ್‌ 22ರಂದು ಆದೇಶ ಹೊರಡಿಸಿರುವ ರೈಲ್ವೆ ಮಂಡಳಿ, ಮುಂದಿನ ತಿಂಗಳ ಅಂತ್ಯದ ವೇಳೆಗೆ ಯೋಜನೆ ಪೂರ್ಣಗೊಳಿಸುವಂತೆ ಎಲ್ಲಾ ವಲಯ ರೈಲ್ವೆ ಇಲಾಖೆ ಕಚೇರಿಗಳಿಗೆ ನಿರ್ದೇಶನ ನೀಡಿದೆ.

ರೈಲ್ವೆ ಮಂಡಳಿಯಕಾರ್ಯನಿರ್ವಾಹಕ ನಿರ್ದೇಶಕ (ನಿಲ್ದಾಣ ಅಭಿವೃದ್ಧಿ)ವಿವೇಕ್ ಸಕ್ಸೇನಾ, ‘ಎಲ್ಲಾ ‘ಎ1’ ದರ್ಜೆಯ ನಿಲ್ದಾಣಗಳಲ್ಲಿ ಧ್ವಜಸ್ತಂಭಗಳನ್ನು ನಿರ್ಮಿಸಲು ಅಗತ್ಯ ಸೌಲಭ್ಯ ಒದಗಿಸಲಾಗುವುದು. 2018ರ ಡಿಸೆಂಬರ್‌ ವೇಳೆಗೆ ಕೆಲಸ ಪೂರ್ಣಗೊಳ್ಳಬೇಕಿದೆ. ಇದಕ್ಕಾಗಿ ರೈಲುನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವಸುಧಾರಣಾ ಕಾರ್ಯಕ್ರಮದಡಿ ಹಣಕಾಸು ಒದಗಿಸಲಾಗುವುದು’ ಎಂದು ತಿಳಿಸಿದ್ದಾರೆ.

ADVERTISEMENT

ಮುಂಬೈನಲ್ಲಿ ಕೇಂದ್ರೀಯ ರೈಲ್ವೆ ಮತ್ತು ಪಶ್ಚಿಮ ರೈಲ್ವೆ ಪ್ರಧಾನ ಕಚೇರಿಗಳನ್ನು ಹೊಂದಿದ್ದು, ಇವುಗಳ ವ್ಯಾಪ್ತಿಯಲ್ಲಿ ಒಟ್ಟು ಏಳು ‘ಎ1’ ದರ್ಜೆಯ ನಿಲ್ದಾಣಗಳಿವೆ. ಇಲ್ಲಿನಛತ್ರಪತಿ ಶಿವಾಜಿ ಮಹಾರಾಜ್ ರೈಲು ನಿಲ್ದಾಣ, ಲೋಕಮಾನ್ಯ ತಿಲಕ್‌ ರೈಲು ನಿಲ್ದಾಣ, ದಾದರ್, ಥಾಣೆ, ಕಲ್ಯಾಣ್, ಮುಂಬೈ ಕೇಂದ್ರ ಮತ್ತು ಬಾಂದ್ರಾ ರೈಲು ನಿಲ್ದಾಣಗಳಲ್ಲಿ ಧ್ವಜಸ್ತಂಭ ನಿರ್ಮಿಸಲಾಗುತ್ತದೆ. ಉಳಿದ 68 ನಿಲ್ದಾಣಗಳನ್ನು ಬೇರೆ ಬೇರೆ ವಲಯಗಳ ವ್ಯಾಪ್ತಿಯಲ್ಲಿ ಬರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.