ADVERTISEMENT

India Covid-19 Update: ಒಂದು ದಿನದಲ್ಲಿ 11,903 ಹೊಸ ಪ್ರಕರಣಗಳು, 311 ಸಾವು

ಪಿಟಿಐ
Published 3 ನವೆಂಬರ್ 2021, 5:30 IST
Last Updated 3 ನವೆಂಬರ್ 2021, 5:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಬುಧವಾರ ಬೆಳಿಗ್ಗೆ ಕೊನೆಗೊಂಡ 24 ಗಂಟೆಗಳಲ್ಲಿದೇಶದಾದ್ಯಂತ 11,903 ಕೋವಿಡ್ ಸೋಂಕಿನ ಹೊಸ ಪ್ರಕರಣಗಳು ವರದಿಯಾಗಿದ್ದು, ಇದೇ ಅವಧಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,51,209ಕ್ಕೆ ಇಳಿಕೆಯಾಗಿದೆ.

ಇದು ಕಳೆದ 252 ದಿನಗಳಲ್ಲೇ ದಾಖಲಾಗಿರುವ ಅತಿ ಕಡಿಮೆ ಸಕ್ರಿಯ ಪ್ರಕರಣಗಳಾಗಿವೆ.ಕೋವಿಡ್ ಸೋಂಕಿನಿಂದ 311 ಮಂದಿ ಸಾವನ್ನಪ್ಪಿದ್ದು, ಇಲ್ಲಿವರೆಗೂ ಸೋಂಕಿನಿಂದ ಸತ್ತವರ ಸಂಖ್ಯೆ 4,59,191ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಒಟ್ಟು ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ 0.44ರಷ್ಟಿದೆ. ಕಳೆದ 26 ದಿನಗಳಿಂದ ನಿರಂತರವಾಗಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ದಿನಕ್ಕೆ 20 ಸಾವಿರದೊಳಗೆ ವರದಿಯಾಗುತ್ತಿದೆ. ಸತತವಾಗಿ 129 ದಿನಗಳಿಂದ 50 ಸಾವಿರಕ್ಕಿಂತ ಕಡಿಮೆ ಸೋಂಕಿನ ಪ್ರಕರಣಗಳು ದಾಖಲಾಗುತ್ತಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.