ADVERTISEMENT

13 ಮಂದಿ ಐಎಸ್‌ ಬೆಂಬಲಿಗರ ಬಂಧನ

ನಾಲ್ಕು ರಾಜ್ಯಗಳಲ್ಲಿ ಎನ್‌ಐಎ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2016, 13:06 IST
Last Updated 22 ಜನವರಿ 2016, 13:06 IST
13 ಮಂದಿ ಐಎಸ್‌ ಬೆಂಬಲಿಗರ ಬಂಧನ
13 ಮಂದಿ ಐಎಸ್‌ ಬೆಂಬಲಿಗರ ಬಂಧನ   

ನವದೆಹಲಿ (ಪಿಟಿಐ): ದೇಶದಾದ್ಯಂತ ಶುಕ್ರವಾರ ಕಾರ್ಯಾಚರಣೆ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಒಟ್ಟು 13 ಮಂದಿ ಐಎಸ್‌ ಬೆಂಬಲಿಗರನ್ನು ಬಂಧಿಸಿದೆ.

ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಿಂದ 13 ಮಂದಿಯನ್ನು ಬಂಧಿಸಲಾಗಿದೆ. ಈ 13 ಮಂದಿ ‘ಜನೂದ್‌– ಉಲ್‌– ಖಲೀಫಾ –ಇ– ಹಿಂದ್‌’ ಎಂಬ ಭಯೋತ್ಪಾದನಾ ಸಂಘಟನೆ ಜತೆಗೆ ಗುರುತಿಸಿಕೊಂಡಿದ್ದರು. ಈ ಸಂಘಟನೆ ಬಹುತೇಕ ಐಎಸ್‌ ಸಿದ್ಧಾಂತಗಳನ್ನೇ ಅಳವಡಿಸಿಕೊಂಡಿದೆ ಎನ್ನಲಾಗಿದೆ.

ಬಂಧಿತರ ಪೈಕಿ ಮುಂಬೈ ನಿವಾಸಿ ಮುನಾಬೀರ್‌ ಮುಸ್ತಾಕ್‌ ತನ್ನನ್ನು ಈ ಸಂಘಟನೆಯ ನಾಯಕ (ಅಮೀರ್‌) ಎಂದು ಘೋಷಿಸಿಕೊಂಡಿದ್ದ. ಆತನಿಂದ ಎಂಟು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿದ್ದಾರೆ.

ADVERTISEMENT

‘ಜನೂದ್‌– ಉಲ್‌– ಖಲೀಫಾ –ಇ– ಹಿಂದ್‌’ ಸಂಘಟನೆ ದೇಶದ ವಿವಿಧ ಕಡೆಗಳಲ್ಲಿ ಬಾಂಬ್‌ ದಾಳಿ ನಡೆಸಲು ಉದ್ದೇಶಿಸಿತ್ತು. ವಿದೇಶೀಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲೂ ಸಂಘಟನೆ ಸಂಚು ರೂಪಿಸಿತ್ತು ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.