ADVERTISEMENT

15 ದಿನಗಳಲ್ಲಿ ಪ್ರಕಟಗೊಳ್ಳಲಿದೆ ನಾಗರಿಕ ಸೇವಾ ಪರೀಕ್ಷೆ ಅಂಕ: ಯುಪಿಎಸ್‌ಸಿ

ಪಿಟಿಐ
Published 1 ಜೂನ್ 2017, 10:07 IST
Last Updated 1 ಜೂನ್ 2017, 10:07 IST
15 ದಿನಗಳಲ್ಲಿ ಪ್ರಕಟಗೊಳ್ಳಲಿದೆ ನಾಗರಿಕ ಸೇವಾ ಪರೀಕ್ಷೆ ಅಂಕ: ಯುಪಿಎಸ್‌ಸಿ
15 ದಿನಗಳಲ್ಲಿ ಪ್ರಕಟಗೊಳ್ಳಲಿದೆ ನಾಗರಿಕ ಸೇವಾ ಪರೀಕ್ಷೆ ಅಂಕ: ಯುಪಿಎಸ್‌ಸಿ   

ನವದೆಹಲಿ: 2016ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆ(ಸಿಎಸ್‌ಇ) ಬರೆದಿದ್ದ ಅಭ್ಯರ್ಥಿಗಳ ಅಂಕಪಟ್ಟಿಯನ್ನು 15 ದಿನಗಳೊಳಗೆ ಪ್ರಕಟಿಸುವುದಾಗಿ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ಪ್ರಕಟಿಸಿದೆ.

ಫಲಿತಾಂಶ ಪ್ರಕಟಗೊಂಡು 15 ದಿನಗಳಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳನ್ನು ಪ್ರಕಟಿಸುವುದಾಗಿ ಯುಪಿಎಸ್‌ಸಿ ತಿಳಿಸಿದೆ. ಆಯೋಗದ ಅಧಿಕೃತ ವೆಬ್‌ಸೈಟ್‌ www.upsc.gov.inನಲ್ಲಿ ಅಂಕ ಪ್ರಕಟಿಸಲಾಗುತ್ತದೆ.

ಬುಧವಾರ ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಕೋಲಾರ ಜಿಲ್ಲೆಯ ಕೆ.ಆರ್‌. ನಂದಿನಿ ಮೊದಲ ರ‍್ಯಾಂಕ್ ಗಳಿಸಿದ್ದಾರೆ. ಕಳೆದ ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 642ನೇ ರ‍್ಯಾಂಕ್ ಪಡೆದು, ಐಆರ್ಎಸ್‌ಗೆ ಆಯ್ಕೆಯಾಗಿದ್ದು ಪ್ರಸ್ತುತ ಫರೀದಾಬಾದ್‌ನಲ್ಲಿ  ತರಬೇತಿ ಪಡೆಯುತ್ತಿದ್ದಾರೆ.

ADVERTISEMENT

ಬಿಟ್ಸ್‌ ಪಿಲಾನಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಿ ಎಂಜಿನಿಯರಿಂಗ್‌ ಪದವಿ ಪೂರೈಸಿರುವ ಅನ್ಮೋಲ್‌ ಷೇರ್‌ ಸಿಂಗ್‌ ಬೇಡಿ ದ್ವಿತೀಯ ರ್ಯಾಂಕ್‌ ಪಡೆದಿದ್ದಾರೆ. 

ಸಾಮಾನ್ಯ ವರ್ಗದ 500, ಇತರೆ ಹಿಂದುಳಿದ ವರ್ಗಗಳ 347, 163 ಎಸ್‌ಸಿ ಹಾಗೂ 89 ಎಸ್‌ಟಿ ಸೇರಿದಂತೆ ಒಟ್ಟು 1,099 (ಪುರುಷ:846, ಮಹಿಳೆ:253) ಅಭ್ಯರ್ಥಿಗಳನ್ನು ದೇಶದ ಉನ್ನತ ಸೇವೆಗಳಿಗೆ ಆಯ್ಕೆ ಮಾಡಲಾಗಿದೆ.

ಪ್ರತಿ ವರ್ಷ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಸೇರಿದಂತೆ ಇತರೆ ನಾಗರಿಕ ಸೇವಾ ಸ್ಥಾನಗಳಿಗೆ ಯುಪಿಎಸ್‌ಸಿ ಮೂರು ಹಂತಗಳ ಪರೀಕ್ಷೆ ಮೂಲಕ ಅರ್ಹ ಅಭ್ಯರ್ಥಿಗಳ ಆಯ್ಕೆ ಮಾಡುತ್ತದೆ.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಆಯೋಗದ ಸಹಾಯವಾಣಿ 011-23385271, 23381125 and 23098543 ಸಂಪರ್ಕಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.