ನವದೆಹಲಿ (ಪಿಟಿಐ): ಬಹುನಿರೀಕ್ಷಿತ 16ನೇ ಲೋಕಸಭೆ ಚುನಾವಣೆ ಏಪ್ರಿಲ್ 7ರಂದು ಆರಂಭಗೊಂಡು ಮೇ 12ರವರೆಗೆ ಒಂಬತ್ತು ಹಂತಗಳಲ್ಲಿ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಮುಖ್ಯ ಚುನಾವಣಾ ಆಯುಕ್ತರಾದ ವಿ.ಎಸ್. ಸಂಪತ್ ಅವರು ಬುಧವಾರ ಚುನಾವಣೆ ವೇಳಾ ಪಟ್ಟಿ ಪ್ರಕಟಿಸಿದರು. ಇದೇ ವೇಳೆ ಸಿಕ್ಕಿಂ, ಓಡಿಶಾ ಮತ್ತು ಆಂಧ್ರಪ್ರದೇಶ ರಾಜ್ಯಗಳ ವಿಧಾನಸಭೆಗಳಿಗೂ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.
ಒಂಬತ್ತು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೇ 16 ರಂದು ಮತ ಎಣಿಕೆ ನಡೆಯಲಿದೆ. ಒಟ್ಟು 81.4 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಸಲ 10 ಕೋಟಿ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ.
ದೇಶದ 544 ಕ್ಷೇತ್ರಗಳ ಒಟ್ಟು 9.30 ಲಕ್ಷ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಇದೇ ಮೊದಲ ಬಾರಿಗೆ ನೋಟಾ (ಯಾರಿಗೂ ಮತದಾನ ಇಲ್ಲ) ಬಳಕೆ ಮಾಡಲಾಗುತ್ತಿದೆ.
ಚುನಾವಣಾ ವೇಳಾಪಟ್ಟಿ:
ಹಂತಗಳು | ದಿನಾಂಕ | ಕ್ಷೇತ್ರಗಳು |
ಮೊದಲ ಹಂತ | ಏಪ್ರಿಲ್–7 | 6 |
ಎರಡನೇ ಹಂತ | ಏಪ್ರಿಲ್–9 | 7 |
ಮೂರನೇ ಹಂತ | ಏಪ್ರಿಲ್–10 | 92 |
ನಾಲ್ಕನೇ ಹಂತ | ಏಪ್ರಿಲ್–12 | 5 |
ಐದನೇ ಹಂತ | ಏಪ್ರಿಲ್–17 | 122 |
ಆರನೇ ಹಂತ | ಏಪ್ರಿಲ್–24 | 117 |
ಏಳನೇ ಹಂತ | ಏಪ್ರಿಲ್–30 | 89 |
ಎಂಟನೇ ಹಂತ | ಮೇ–7 | 64 |
ಒಂಬತ್ತನೇ ಹಂತ | ಮೇ–12 | 41 |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.