ADVERTISEMENT

ಜಾರ್ಖಂಡ್: 16 ವರ್ಷದ ಬಾಲಕಿಯನ್ನು ಮಹಡಿಯಿಂದ ತಳ್ಳಿ ಹತ್ಯೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 16:29 IST
Last Updated 16 ಫೆಬ್ರುವರಿ 2023, 16:29 IST
.
.   

ಧನ್ಬಾದ್‌: ನಾಲ್ಕು ಅಂತಸ್ತಿನ ವಸತಿ ಸಮುಚ್ಚಯದ ಮೇಲಿಂದ 16 ವರ್ಷದ ಬಾಲಕಿಯನ್ನು ನಾಲ್ವರು ಯುವಕರು ಬುಧವಾರ ಕೆಳಕ್ಕೆ ತಳ್ಳಿ ಹತ್ಯೆ ಮಾಡಿರುವ ಘಟನೆ ಜಾರ್ಖಂಡ್‌ನ ಧನ್ಬಾದ್‌ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ತಾಯಿ ನೀಡಿರುವ ದೂರಿನಡಿ ಪ್ರಕರಣ ದಾಖಲಿಸಲಾಗಿದೆ.

‘ಆರೋಪಿಗಳಾದ ನಾಲ್ವರ ಪೈಕಿ ಇಬ್ಬರು ಯುವಕರು ಅದೇ ವಸತಿ ಸಮುಚ್ಚಯದಲ್ಲಿ ವಾಸಿಸುತ್ತಿದ್ದರು. ಅವರಲ್ಲಿ ಒಬ್ಬ ಆಗಾಗ ಬಾಲಕಿಯೊಂದಿಗೆ ಮಾತನಾಡುತ್ತಿದ್ದ. ಈ ಕುರಿತು ಮಗಳಿಗೆ ಬುದ್ಧಿವಾದ ಹೇಳಿ, ಆತನೊಂದಿಗೆ ಮಾತನಾಡದಂತೆ ಎಚ್ಚರಿಕೆ ನೀಡಿದ್ದೆ. ಘಟನೆ ನಡೆದ ದಿನ ಸಂಜೆ ಆ ಯುವಕ ತನ್ನ ಸ್ನೇಹಿತರೊಂದಿಗೆ ವಸತಿ ಸಮುಚ್ಚಯದ ಮೊದಲ ಮಹಡಿಯಲ್ಲಿರುವ ಮನೆಯಲ್ಲಿ ಇದ್ದಿದ್ದನ್ನು ಗಮನಿಸಿದ್ದೆ’ ಎಂದು ಬಾಲಕಿ ತಾಯಿ ತಿಳಿಸಿದ್ದಾರೆ.

‘ಧನ್ಬಾದ್‌ನ ಕಾನ್ವೆಂಟ್ ಶಾಲೆಯಲ್ಲಿ 12ನೇ ತರಗತಿ ಓದುತ್ತಿದ್ದ ಬಾಲಕಿ ವಸತಿ ಸಮುಚ್ಚಯದಿಂದ ಕೆಳಗೆ ಬಿದ್ದಿದ್ದು, ಅಲ್ಲಿ ಯಾರೆಲ್ಲ ಇದ್ದರು ಎಂಬ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಅಮರ್ ಕುಮಾರ್‌ ಪಾಂಡೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.