ನವದೆಹಲಿ: ‘ಲಾವೊಸ್‌ನಲ್ಲಿ ಅಸುರಕ್ಷಿತ ಮತ್ತು ನಿಯಮಬಾಹಿರ ಕೆಲಸಗಳಿಗೆ ನಿಯೋಜಿಸಲಾಗಿದ್ದ 17 ಮಂದಿ ಭಾರತೀಯರನ್ನು ತಾಯ್ನಾಡಿಗೆ ಕರೆತರಲಾಗುತ್ತಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಶನಿವಾರ ಇಲ್ಲಿ ತಿಳಿಸಿದ್ದಾರೆ.
ದೇಶ ಮತ್ತು ವಿದೇಶಗಳಲ್ಲೂ ಮೋದಿ ಕೀ ಗ್ಯಾರಂಟಿ ಫಲ ನೀಡಲಿದೆ. ಅಲ್ಲಿನ ಭಾರತೀಯ ರಾಯಭಾರ ಕಚೇರಿಯ ಶ್ರಮ ಶ್ಲಾಘನೀಯ. ಎಂದು ಈ ಸಂಬಂಧ ಅವರು ‘ಎಕ್ಸ್’ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಾಂಬೋಡಿಯಾದಲ್ಲಿ ಉದ್ಯೋಗಾವಕಾಶ ಕುರಿತು ಆಮಿಷ ಒಡ್ಡುವ ಮಾನವ ಕಳ್ಳಸಾಗಣೆ ಕುರಿತು ಜಾಗ್ರತೆ ಇರಬೇಕು. ಉದ್ಯೋಗದಾತರ ಹಿನ್ನೆಲೆ ಪರಿಶೀಲಿಸಬೇಕು ಎಂದು ವಿದೇಶಗಳಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಭಾರತೀಯರಿಗೆ ಸಚಿವಾಲಯವು ಸಲಹೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.