ADVERTISEMENT

ಬೌದ್ಧ ಶಾಲೆಯ ಹದಿನೆಂಟು ಮಕ್ಕಳ ರಕ್ಷಣೆ

ಶಾಲೆ ಮುಚ್ಚಿ ಎರಡು ತಿಂಗಳಾದರೂ ಮಾಹಿತಿ ನೀಡದ ಆಡಳಿತ ಮಂಡಳಿ

ಪಿಟಿಐ
Published 15 ಸೆಪ್ಟೆಂಬರ್ 2018, 17:39 IST
Last Updated 15 ಸೆಪ್ಟೆಂಬರ್ 2018, 17:39 IST
   

ಅಗರ್ತಲ: ಶಾಲೆ ಮುಚ್ಚಿ ಎರಡು ತಿಂಗಳಾದರೂ, ಪೋಷಕರಿಗೆ ಮಾಹಿತಿ ನೀಡದೆ ವಶದಲ್ಲಿರಿಸಿಕೊಂಡಿದ್ದಬಿಹಾರದ ಬೌದ್ಧ ಮಿಷನರಿ ಶಾಲೆಯ ಹದಿನೆಂಟು ಮಂದಿ ಬುಡಕಟ್ಟು ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ.

ಈ ಮಕ್ಕಳನ್ನು ಪೊಲೀಸರು ರೈಲಿನಲ್ಲಿ ಕರೆತಂದಿದ್ದಾರೆ. ಕುಟುಂಬ ಕಲ್ಯಾಣ ಸಚಿವ ಸುದೀಪ್‌ ರಾಯ್‌ ಬರ್ಮನ್‌ ಅಗರ್ತಲ ರೈಲು ನಿಲ್ದಾಣದಲ್ಲಿ ಮಕ್ಕಳನ್ನು ಬರಮಾಡಿಕೊಂಡರು.

‘ಈ ಮಕ್ಕಳುಉತ್ತರ ತ್ರಿಪುರಾ ಜಿಲ್ಲೆಯ ಪೆನ್ಚರ್ಥಾಲ್‌ ಪ್ರದೇಶದ ಮೊಗ್‌ ಮತ್ತು ಚಕ್ಮಾ ಸಮುದಾಯಕ್ಕೆ ಸೇರಿದವರು.ಶಿಕ್ಷಣಕ್ಕಾಗಿ ಇವರನ್ನು ಬಿಹಾರದ ಬೋಧ್‌ಗಯಾಕ್ಕೆ ಕಳುಹಿಸಲಾಗಿತ್ತು.ಆದರೆ ಶಾಲೆ ಮುಚ್ಚಿದರೂ, ಪೋಷಕರಿಗೆ ಮಾಹಿತಿ ನೀಡಿರಲಿಲ್ಲ’ ಎಂದು ಸಚಿವರು ತಿಳಿಸಿದ್ದಾರೆ.

ADVERTISEMENT

‘ಪ್ರಕರಣದ ತನಿಖೆ ನಡೆಸುವಂತೆ ಬುಡಕಟ್ಟು ಕಲ್ಯಾಣ ಇಲಾಖೆ ಬಿಹಾರ ಸರ್ಕಾರಕ್ಕೆ ಮನವಿ ಮಾಡಿದೆ. ರಾಜ್ಯ ಸರ್ಕಾರದ ಗಮನಕ್ಕೆ ತರದೆ ಬೇರೆ ರಾಜ್ಯಕ್ಕೆ ಮಕ್ಕಳನ್ನು ಕಳುಹಿಸುವುದು ಸರಿಯಲ್ಲ. ಈ ಘಟನೆ ನಮ್ಮೆಲ್ಲರ ಕಣ್ತೆರೆಸಿದೆ’ ಎಂದು ಹೇಳಿದ್ದಾರೆ.

‘ಮಕ್ಕಳ ದೇಹದ ಮೇಲೆ ಚಿತ್ರಹಿಂಸೆ ನೀಡಿರುವ ಗುರುತು ಇದೆ. ಈ ಮಕ್ಕಳ ಪೋಷಕರು ಶಾಲೆಗೆ ಶುಲ್ಕವನ್ನುಪಾವತಿಸಿದ್ದಾರೆ. ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಶಾಲೆಯ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಅವರು ತಿಳಿಸಿದರು.

ಇದೇ ಶಾಲೆಯಲ್ಲಿ ಅಸ್ಸಾಂ ರಾಜ್ಯದ ಮಕ್ಕಳು ಇದ್ದರು. ಅವರನ್ನು ಅಸ್ಸಾಂ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.