ADVERTISEMENT

ಸರಣಿ ಸ್ಫೋಟ: ಇಬ್ಬರ ವಿರುದ್ಧ ದೋಷಾರೋಪ ಪಟ್ಟಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2019, 19:26 IST
Last Updated 26 ಫೆಬ್ರುವರಿ 2019, 19:26 IST

ಮುಂಬೈ: 1993ರ ಸರಣಿ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ವಿರುದ್ಧ ವಿಶೇಷ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಮೊಹಮ್ಮದ್‌ ಫಾರೂಖ್‌ ಮನ್ಸೂರ್‌ ಅಲಿಯಾಸ್‌ ಫಾರೂಖ್‌ ಟಕ್ಲಾ ಮತ್ತು ಅಹ್ಮದ್‌ ಕಲಂ ಶೇಖ್‌ ಅಲಿಯಾಸ್‌ ಲಂಬು ವಿರುದ್ಧ ಈ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ದುಬೈನಿಂದ ಕರೆತರಲಾಗಿದ್ದ ಟಕ್ಲಾನನ್ನು ನವದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಬಳಿಕ, ಕಳೆದ ವರ್ಷ ಮಾರ್ಚ್‌ನಲ್ಲಿ ಮುಂಬೈಗೆ ಕರೆತರಲಾಗಿತ್ತು. ಲಂಬುನನ್ನು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ ಕಳೆದ ಮೇನಲ್ಲಿ ಬಂಧಿಸಲಾಗಿತ್ತು.

ADVERTISEMENT

ಪಾಕಿಸ್ತಾನದಲ್ಲಿ ತರಬೇತಿ ಕೊಡಿಸಲು ಟಕ್ಲಾ ದುಬೈನಲ್ಲೇ ಕುಳಿತು ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸುತ್ತಿದ್ದ. ಲಂಬು ಸಹ ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ವಿಚಾರಣೆಯನ್ನು ಮಾರ್ಚ್‌ 7ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.