ADVERTISEMENT

ಅಬು ಸಲೇಂ ಬಿಡುಗಡೆ: ಸರ್ಕಾರ ತನ್ನ ವಾಗ್ದಾನಕ್ಕೆ ಬದ್ಧವಾಗಿರಲಿ- ಸುಪ್ರೀಂ ಕೋರ್ಟ್‌

ಪಿಟಿಐ
Published 11 ಜುಲೈ 2022, 10:53 IST
Last Updated 11 ಜುಲೈ 2022, 10:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 1993ರ ಮುಂಬೈ ಸ್ಫೋಟ ಪ್ರಕರಣದ ಅಪರಾಧಿ ಅಬು ಸಲೇಂ 25 ವರ್ಷ ಶಿಕ್ಷೆಯ ಅವಧಿ ಪೂರ್ಣಗೊಳಿಸಿರುವ ಕಾರಣ ಆತನ ಬಿಡುಗಡೆ ಮತ್ತು ಪೋರ್ಚುಗಲ್‌ಗೆ ನೀಡಿದ್ದ ವಾಗ್ದಾನಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿರಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

2002ರಲ್ಲಿ ತನ್ನನ್ನು ಭಾರತಕ್ಕೆ ಒಪ್ಪಿಸುವಾಗ ಶಿಕ್ಷೆಯ ಅವಧಿಯು 25 ವರ್ಷ ಮೀರುವುದಿಲ್ಲ ಎಂದು ಕೇಂದ್ರ ಸರ್ಕಾರ ಪೋರ್ಚುಗಲ್‌ಗೆ ತಿಳಿಸಿತ್ತು. ಈ ಭರವಸೆಯನ್ನು ಆಗಿನ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ನೀಡಿದ್ದರು ಎಂದು ಸಲೇಂ ಪ್ರತಿಪಾದಿಸಿದ್ದ.

ನ್ಯಾಯಮೂರ್ತಿಗಳಾದ ಎಸ್‌.ಕೆ.ಕೌಲ್‌ ಮತ್ತು ಎಂ.ಎಂ.ಸುಂದರೇಶ್‌ ಅವರಿದ್ದ ನ್ಯಾಯಪೀಠ, ಅಪರಾಧಿ 25 ವರ್ಷದ ಶಿಕ್ಷೆ ಪೂರೈಸಿದ್ದಾನೆ. ಹೀಗಾಗಿ, ಸಂವಿಧಾನದ ವಿಧಿ 72ರಲ್ಲಿ ದತ್ತವಾದ ಅಧಿಕಾರ ಬಳಸಬೇಕು ಎಂದು ರಾಷ್ಟ್ರಪತಿ ಅವರಿಗೆ ಸಲಹೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿರಬೇಕು ಎಂದು ಅಭಿಪ್ರಾಯಪಟ್ಟಿತು.

ADVERTISEMENT

ಸಂಬಂಧಿಸಿದ ಕಡತವನ್ನು 25 ವರ್ಷಗಳ ಶಿಕ್ಷೆಯ ಅವಧಿ ಮುಗಿದ ಒಂದು ತಿಂಗಳಲ್ಲಿ ಕಳುಹಿಸಬೇಕು. ವಾಸ್ತವವಾಗಿ, ಕ್ರಿಮಿನಲ್‌ ಅಪರಾಧ ದಂಡ ಸಂಹಿತೆಯ ಅನುಸಾರ, ಶಿಕ್ಷೆಯ ಅವಧಿ ಮುಗಿಯುತ್ತಿದ್ದಂತೆ ಸ್ವಯಂ ಈ ಕೆಲಸ ಮಾಡಬೇಕಿತ್ತು ಎಂದು ಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.