ADVERTISEMENT

2ಜಿ: ಜೆಪಿಸಿ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 17 ಮೇ 2012, 19:30 IST
Last Updated 17 ಮೇ 2012, 19:30 IST

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಮೇಲಿನ ಸಂಸದೀಯ ಜಂಟಿ ಸಮಿತಿ (ಜೆಪಿಸಿ)ಯ ಕಾಲ ಮಿತಿಯನ್ನು ಲೋಕಸಭೆಯ ಚಳಿಗಾಲದ ಅಧಿವೇಶನದವರೆಗೆ ಎರಡನೇ ಬಾರಿಗೆ ವಿಸ್ತರಿಸಲು ಗುರುವಾರ ಅನುಮೋದನೆ ದೊರೆತಿದೆ.

ಚಳಿಗಾಲದ ಅಧಿವೇಶನದ ಕೊನೆ ದಿನದವರೆಗೆ ಜೆಪಿಸಿ ಅವಧಿಯನ್ನು ವಿಸ್ತರಿಸುವಂತೆ ಕೋರಿ ಸಮಿತಿಯ ಅಧ್ಯಕ್ಷ ಪಿ.ಸಿ. ಚಾಕೊ ಲೋಕಸಭೆಯಲ್ಲಿ ಮಂಡಿಸಿದ ಗೊತ್ತುವಳಿಗೆ ಸದನ ಧ್ವನಿಮತದ ಅನುಮೋದನೆ ನೀಡಿತು.

ಪ್ರಸಕ್ತ ಮುಂಗಡ ಪತ್ರ ಅಧಿವೇಶನದ ಕೊನೆ ದಿನದಂದು ಸಮಿತಿಯ ಕಾಲಾವಧಿ ಪೂರ್ಣಗೊಳ್ಳುತ್ತಿತ್ತು.
ಸೆಪ್ಟೆಂಬರ್‌ನಲ್ಲಿ ಸಮಿತಿಯ ಅವಧಿಯನ್ನು ಪ್ರಸಕ್ತ ಮುಂಗಡಪತ್ರದ ಅಧಿವೇಶನದ ಕೊನೆ ದಿನದವರೆಗೆ ವಿಸ್ತರಿಸಲಾಗಿತ್ತು.

ADVERTISEMENT

1998ರಿಂದ 2009ರವರೆಗಿನ 2ಜಿ ತರಂಗಾಂತರ ನೀತಿಯ ಆಮೂಲಾಗ್ರ ವರದಿ ನೀಡಲು ಮಾರ್ಚ್ 4ರಂದು ಲೋಕಸಭೆಯ 20 ಮತ್ತು ರಾಜ್ಯಸಭೆಯ 10 ಸದಸ್ಯರನ್ನೊಳಗೊಂಡ ಸಂಸದೀಯ ಜಂಟಿ ಸಮಿತಿ ರಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.