ADVERTISEMENT

2ಜಿ: ಮಹತ್ವದ ಘಟ್ಟ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 19:30 IST
Last Updated 7 ಏಪ್ರಿಲ್ 2012, 19:30 IST

ನವದೆಹಲಿ: 2ಜಿ ಹಗರಣದಲ್ಲಿ ಭಾಗಿಯಾಗಿರುವ ಮಲ್ಯೇಷ್ಯಾದ ಉದ್ಯಮಿ ಮತ್ತು ಮಾಕ್ಸಿಸ್ ಕಮ್ಯೂನಿಕೇಷನ್ ಮುಖ್ಯಸ್ಥ ಆನಂದ್ ಕೃಷ್ಣನ್ ಅವರನ್ನು ದೇಶಕ್ಕೆ ಕರೆಯಿಸುವುದಕ್ಕೆ ಸಂಬಂಧಿಸಿದ ಪತ್ರವನ್ನು ಸಿಬಿಐ ಸಿದ್ಧಪಡಿಸಿ ಗೃಹ ಸಚಿವಾಲಯಕ್ಕೆ ಕಳುಹಿಸಿದೆ.

ಇನ್ನು ಮುಂದೆ ಗೃಹ ಸಚಿವಾಲಯ, ಕಾನೂನು ಮತ್ತು ವಿದೇಶಾಂಗ ಸಚಿವಾಲಯ ಹಾಗೂ ನ್ಯಾಯಾಲಯ ಈ ಬಗ್ಗೆ ಕ್ರಮ ಜರುಗಿಸಬೇಕಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.