ಪಟ್ನಾ: ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಪಿಡುಗುಗಳ ನಿರ್ಮೂಲನೆಗಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಕರೆ ನೀಡಿದ್ದ ‘ಮಾನವ ಸರಪಳಿ’ ಅಭಿಯಾನದಲ್ಲಿ 5.17 ಕೋಟಿ ಜನರು ಭಾಗವಹಿಸಿದ್ದಾರೆ.
ಭಾನುವಾರ ಬೆಳಿಗ್ಗೆ 11.30ಕ್ಕೆ ಬಿಹಾರದ ಬೀದಿಬೀದಿಗಳಲ್ಲಿ ಜಮಾಯಿಸಿದನಾಗರಿಕರು18,034 ಕಿ.ಮೀ ಉದ್ದದ ಮಾನವ ಸರಪಳಿ ರಚಿಸಿದರು. ಈ ಮೂಲಕ 2017 (11 ಸಾವಿರ ಕಿ.ಮೀ) ಮತ್ತು 2018ರಲ್ಲಿ (14 ಸಾವಿರ ಕಿ.ಮೀ) ರಚಿಸಿದ್ದ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ಈ ಕುರಿತು ರಾಜ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಇದರಲ್ಲಿ 55 ವರ್ಷದ ಶಿಕ್ಷಕರೊಬ್ಬರು ಸೇರಿದಂತೆ ಇಬ್ಬರು ಮೃತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.