ADVERTISEMENT

ಜಮೀನಿನಲ್ಲಿ ಸಿಕ್ಕ ವಜ್ರದ ಕಲ್ಲುಗಳಿಂದ ಶ್ರೀಮಂತರಾದ ಕಾರ್ಮಿಕರು

ಏಜೆನ್ಸೀಸ್
Published 3 ನವೆಂಬರ್ 2020, 12:46 IST
Last Updated 3 ನವೆಂಬರ್ 2020, 12:46 IST
 ಚಿತ್ರ ಕೃಪೆ: ಜಿಯೊಲಾಜಿ.ಕಾಮ್‌
ಚಿತ್ರ ಕೃಪೆ: ಜಿಯೊಲಾಜಿ.ಕಾಮ್‌   

ಭೋಪಾಲ್‌: ಇಲ್ಲಿನ ಪನ್ನಾ ಗಣಿ ಪ್ರದೇಶ ವ್ಯಾಪ್ತಿಯಲ್ಲಿ ಇಬ್ಬರು ಕಾರ್ಮಿಕರಿಗೆ ವಜ್ರದ ಕಲ್ಲು ಸಿಕ್ಕಿದ್ದು ಅವರು ಲಕ್ಷಾಧೀಶ್ವರರಾಗಲಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಜರುವಾಪುರ ಗಣಿ ಪ್ರದೇಶದಲ್ಲಿ ದಿಲೀಪ್ ಮಿಸ್ತ್ರಿಗೆ 7.44 ಕ್ಯಾರೆಟಿನ ಹಾಗೂ ಕಲ್ಯಾಣಪುರ ಪ್ರದೇಶದಲ್ಲಿ ಲಖನ್ ಯಾದವ್ ಕೃಷ್ಣ ಎಂಬುವರಿಗೆ 14.98 ಕ್ಯಾರೆಟ್ ವಜ್ರದ ಕಲ್ಲು ದೊರೆತಿದೆ ಎಂದು ಸರ್ಕಾರಿ ವಜ್ರ ಪರಿಶೋಧಕ ಅನುಪಮ್ ಸಿಂಗ್ ತಿಳಿಸಿದ್ದಾರೆ.

ಈಗಾಗಲೇ ವಜ್ರದ ಕಲ್ಲುಗಳನ್ನು ಇಲ್ಲಿನ ಸರ್ಕಾರಿ ಕಚೇರಿಯಲ್ಲಿ ಹರಾಜಿಗೆ ಇಡಲಾಗಿದೆ. 7.44 ಕ್ಯಾರೆಟಿನ ವಜ್ರದ ಕಲ್ಲಿಗೆ ಸುಮಾರು ₹ 30 ಲಕ್ಷ, ಹಾಗೂ 14.98 ಕ್ಯಾರೆಟಿನ ವಜ್ರದ ಕಲ್ಲಿಗೆ ಸುಮಾರು ₹ 60 ಲಕ್ಷ ರೂಪಾಯಿ ಸಿಗಲಿದೆ ಎಂದು ಅಂದಾಜಿಸಿದ್ದಾರೆ. ಇದರಲ್ಲಿ ಶೇ 12 ರಷ್ಟು ತೆರಿಗೆಯನ್ನು ಕಡಿತ ಮಾಡಿ ಉಳಿದ ಹಣವನ್ನು ಆ ಇಬ್ಬರು ಕಾರ್ಮಿಕರಿಗೆ ನೀಡಲಾಗುವುದು ಎಂದು ಅನುಪಮ್ ಸಿಂಗ್‌ ಹೇಳಿದ್ದಾರೆ.

ADVERTISEMENT

ನಮ್ಮ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಈ ಹಣದಲ್ಲಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಸುವುದಾಗಿ ಆ ಕಾರ್ಮಿಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.