ADVERTISEMENT

515 ಸೈಬರ್‌ ಪ್ರಕರಣಗಳಲ್ಲಿ ಬೇಕಾಗಿದ್ದ 20 ಮಂದಿ ಬಂಧನ

ಪಿಟಿಐ
Published 12 ಮೇ 2025, 16:07 IST
Last Updated 12 ಮೇ 2025, 16:07 IST
ಸೈಬರ್‌ ಅಪರಾಧ (ಸಾಂದರ್ಭಿಕ ಚಿತ್ರ)
ಸೈಬರ್‌ ಅಪರಾಧ (ಸಾಂದರ್ಭಿಕ ಚಿತ್ರ)   

ಹೈದರಾಬಾದ್‌: ದೇಶದಾದ್ಯಂತ 515 ಸೈಬರ್‌ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸುಮಾರು 20 ಆರೋಪಿಗಳನ್ನು ತೆಲಂಗಾಣ ಸೈಬರ್‌ ಭದ್ರತಾ ಬ್ಯೂರೊ (ಟಿಜಿಸಿಎಸ್‌ಬಿ) ಅಧಿಕಾರಿಗಳು ಗುಜರಾತ್‌ನ ಸೂರತ್‌ನಲ್ಲಿ ಸೋಮವಾರ ಬಂಧಿಸಿದ್ದಾರೆ.

ಈ ಪ್ರಕರಣಗಳ ಪೈಕಿ 60 ‍ಪ್ರಕರಣಗಳು ತೆಲಂಗಾಣದಲ್ಲಿಯೇ ದಾಖಲಾಗಿವೆ. ‘ಪ್ರಕರಣಗಳ ಸಂಬಂಧ ಖಾಸಗಿ ಕಂಪನಿಗಳ ಉದ್ಯೋಗಿಗಳು, ಉದ್ಯಮಿಗಳು ಹಾಗೂ ಖಾಸಗಿ ಬ್ಯಾಂಕ್‌ ಸಿಬ್ಬಂದಿಯನ್ನು ಬಂಧಿಸಲಾಗಿದೆ’ ಎಂದು ಟಿಜಿಸಿಎಸ್‌ಬಿ ನಿರ್ದೇಶಕ ಶಿಖಾ ಗೋಯಲ್‌ ಮಾಹಿತಿ ನೀಡಿದರು.

ಅಕ್ರಮಗಳಿಂದ ಬಂದ ಹಣವನ್ನು ಇತರೆ ಖಾತೆಗಳಿಗೆ ವರ್ಗಾಯಿಸಿದ ಮತ್ತು ಚೆಕ್‌ ಮೂಲಕ ಹಣ ಪಡೆದುಕೊಂಡದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಜೊತೆಗೆ, ಅಕ್ರಮಗಳಿಂದ ಬಂದ ಹಣವನ್ನು ಈ ಆರೋಪಿಗಳು ವರ್ಗಾಯಿಸುತ್ತಿದ್ದ 14 ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ ಮತ್ತು ಆರು ಏಜೆಂಟರನ್ನೂ ಬಂಧಿಸಿದ್ದಾರೆ.

ADVERTISEMENT

ಮೇ 1ರಿಂದ 10ರವರೆಗೆ ತೆಲಂಗಾಣ ಪೊಲೀಸರು ಅಂತರರಾಜ್ಯ ವಿಶೇಷ ಕಾರ್ಯಾಚರಣೆ ನಡೆಸಿದ್ದರು. ‘ಆರೋಪಿಗಳ ಮೇಲೆ ಸೈಬರ್‌ ವಂಚನೆ, ಉದ್ಯಮ ಮತ್ತು ಹೂಡಿಕೆ ಹಗರಣಗಳ ಆರೋಪಗಳಿದ್ದವು. ಸೈಬರ್‌ ಅಪರಾಧಕ್ಕಾಗಿ ಬಳಸುತ್ತಿದ್ದ ಅಕ್ರಮ ಬ್ಯಾಂಕ್‌ ಖಾತೆಗಳನ್ನು ಪತ್ತೆ ಮಾಡಿ, ಅವುಗಳನ್ನು ನಿಷ್ಕ್ರಿಯಗೊಳಿಸುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.