ADVERTISEMENT

ಮೋದಿಗೆ ಕ್ಲೀನ್‌ಚಿಟ್‌ ಪ್ರಶ್ನಿಸಿ ಜಾಫ್ರಿ ಮೇಲ್ಮನವಿ: ಜುಲೈನಲ್ಲಿ ವಿಚಾರಣೆ

ಗೋಧ್ರಾ ಹತ್ಯಾಕಾಂಡ; 2002

ಪಿಟಿಐ
Published 12 ಫೆಬ್ರುವರಿ 2019, 1:48 IST
Last Updated 12 ಫೆಬ್ರುವರಿ 2019, 1:48 IST
ಜಾಕಿಯಾ ಜಾಫ್ರಿ, ನರೇಂದ್ರ ಮೋದಿ
ಜಾಕಿಯಾ ಜಾಫ್ರಿ, ನರೇಂದ್ರ ಮೋದಿ   

ನವದೆಹಲಿ: 2002ರ ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ ನರೇಂದ್ರ ಮೋದಿ ಸೇರಿದಂತೆ ಹಲವರಿಗೆ ಎಸ್‌ಐಟಿ (ವಿಶೇಷ ತನಿಖಾ ಸಂಸ್ಥೆ) ಕ್ಲೀನ್‌ಚಿಟ್‌ ನೀಡಿರುವುದನ್ನು ಪ್ರಶ್ನಿಸಿ ಜಾಕಿಯಾ ಜಾಫ್ರಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಜುಲೈನಲ್ಲಿ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ತಿಳಿಸಿದೆ.

ನ್ಯಾಯಮೂರ್ತಿ ಎ.ಎಂ ಖಾನ್‌ವಿಲ್ಕರ್‌ ನೇತೃತ್ವದ ನ್ಯಾಯಪೀಠವು, ಅರ್ಜಿ ವಿಚಾರಣೆಯನ್ನು ಜುಲೈಗೆ ಮುಂದೂಡಿದೆ.

2002ರಲ್ಲಿ ಗೋಧ್ರಾ ಘಟನೆಯ ಬಳಿಕ ನಡೆದ ಗಲಭೆಯಲ್ಲಿ ಜಾಕಿಯಾ ಪತಿ, ಮಾಜಿ ಸಂಸದ ಎಹಸಾನ್ ಜಾಫ್ರಿ ಸೇರಿದಂತೆ 69 ಜನರನ್ನು ಹತ್ಯೆ ಮಾಡಲಾಗಿತ್ತು.

ADVERTISEMENT

ಈ ಗಲಭೆಯ ಸಂಚಿನಲ್ಲಿ ಅಂದಿನ ‌ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಸೇರಿದಂತೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸೇರಿ 57 ಜನರು ಶಾಮೀಲಾಗಿದ್ದರು ಎಂದು ಜಾಕಿಯಾ ಗಂಭೀರವಾದ ಆರೋಪ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.