ADVERTISEMENT

JNU ಮಾಜಿ ವಿದ್ಯಾರ್ಥಿ ಶಾರ್ಜೀಲ್ ಜಾಮೀನು ಅರ್ಜಿ: ತೀರ್ಪು ಕಾಯ್ದಿರಿಸಿದ ಕೋರ್ಟ್‌

ಪಿಟಿಐ
Published 9 ಜುಲೈ 2025, 15:36 IST
Last Updated 9 ಜುಲೈ 2025, 15:36 IST
ಶಾರ್ಜೀಲ್ ಇಮಾಮ್‌
ಶಾರ್ಜೀಲ್ ಇಮಾಮ್‌   

ನವದೆಹಲಿ: 2020ರಲ್ಲಿ ದೆಹಲಿಯಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜೆಎನ್‌ಯು ಮಾಜಿ ವಿದ್ಯಾರ್ಥಿ ಶಾರ್ಜೀಲ್ ಇಮಾಮ್‌ ಹಾಗೂ ಉಮರ್‌ ಖಲೀದ್‌ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್ ತೀರ್ಪನ್ನು ಬುಧವಾರ ಕಾಯ್ದಿರಿಸಿತು. 

ವಾದ–ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳಾದ ನವೀನ್‌ ಚಾವ್ಲಾ ಹಾಗೂ ಶಾಲಿಂದರ್‌ ಕೌರ್‌ ಅವರಿದ್ದ ಪೀಠವು ತೀರ್ಪು ಕಾಯ್ದಿರಿಸಿತು. 

‘ಇದು ಸಾಮಾನ್ಯ ಹಿಂಸಾಚಾರ ಪ್ರಕರಣವಲ್ಲ; ಜಾಗತಿಕ ಮಟ್ಟದಲ್ಲಿ ಭಾರತದ ಮಾನಹಾನಿ ಮಾಡುವ ಉದ್ದೇಶದಿಂದ ಕೂಡಿದ ಪೂರ್ವಯೋಜಿತ ಕೃತ್ಯವಾಗಿತ್ತು. ಹೀಗಾಗಿ ಜಾಮೀನು ನೀಡಬಾರದು’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು. 

ADVERTISEMENT

2019ರ ಡಿಸೆಂಬರ್ 13 ಮತ್ತು 16ರಂದು ಕ್ರಮವಾಗಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಭಾಷಣದ ಮೂಲಕ ಶಾರ್ಜೀಲ್ ಹಾಗೂ ಉಮರ್ ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.