ADVERTISEMENT

ಜಮ್ಮು ಕಾಶ್ಮೀರ: ಕಂದಕಕ್ಕೆ ಉರುಳಿದ ಬಸ್‌, 35 ಸಾವು

ಏಜೆನ್ಸೀಸ್
Published 1 ಜುಲೈ 2019, 17:01 IST
Last Updated 1 ಜುಲೈ 2019, 17:01 IST
   

ಶ್ರೀನಗರ: ಕಿಕ್ಕಿರಿದು ತುಂಬಿದ್ದ ಮಿನಿ ಬಸ್‌ ಸೋಮವಾರ ಕಂದಕಕ್ಕೆ ಉರುಳಿದ ಪರಿಣಾಮ 35 ಪ್ರಯಾಣಿಕರು ಸಾವನ್ನಪ್ಪಿದ್ದು, 17 ಮಂದಿ ಗಾಯಗೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ್‌ ಜಿಲ್ಲೆ ಕೇಶ್ವಾನ್‌ ಸಮೀಪದ ಠಾಕ್ರಿ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ. ಕೇಶ್ವಾನ್‌ ಪ್ರದೇಶದಿಂದ ಕಿಶ್ತ್‌ವಾರ್‌ಕ್ಕೆ ಹೋಗುವ ಕಡಿದಾದ ತಿರುವಿನಲ್ಲಿ ಬರುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿತು. ನಂತರ 250 ಅಡಿ ಕೆಳಕ್ಕೆ ಪಲ್ಟಿಯಾಗಿ ಕುರ್‍ಯಾಲ್‌ ಪುಲ್ ಪ್ರದೇಶದ ಬಳಿ ಇರುವ ಠಾಕ್ರಿ ಪ್ರದೇಶದಲ್ಲಿ ಬಿತ್ತು ಎಂದು ವರದಿಗಳು ತಿಳಿಸಿವೆ.

25 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದ ಮಿನಿ ಬಸ್‌ನಲ್ಲಿ 52 ಮಂದಿ ಪ್ರಯಾಣಿಕರಿದ್ದರು. ಅವಘಡ ಸಂಭವಿಸಿದಮಾಹಿತಿ ಬಂದ ತಕ್ಷಣವೇ ಪೊಲೀಸ್‌, ಎಸ್‌ಡಿಆರ್‌ಎಫ್‌ ಹಾಗೂ ರೆಡ್‌ ಕ್ರಾಸ್‌ ಸಿಬ್ಬಂದಿಯೊಂದಿಗೆ ತೆರಳಿ ಕಾರ್ಯಾಚರಣೆ ನಡೆಸಲಾಯಿತು. ಸೇನಾಪಡೆ ಯೋಧರು ಸಹ ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದರು. ಗಾಯಾಳುಗಳನ್ನು ಕಿಶ್ತ್‌ವಾರ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.