ADVERTISEMENT

ಮಾನವಸಹಿತ ಗಗನಯಾನ ಯೋಜನೆಗೆ ಕೇಂದ್ರದ ಸಚಿವ ಸಂಪುಟ ಅಸ್ತು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 10:57 IST
Last Updated 28 ಡಿಸೆಂಬರ್ 2018, 10:57 IST
   

ನವದೆಹಲಿ:ಮಾನವಸಹಿತ ಗಗನಯಾನಯೋಜನೆಗೆ ಕೇಂದ್ರದ ಸಚಿವ ಸಂಪುಟ ಸಭೆ ಶುಕ್ರವಾರ ಒಪ್ಪಿಗೆ ನೀಡಿದೆ.ಭಾರತದ ಮೂವರು ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆಕಳುಹಿಸುವ ಯೋಜನೆ ಇದಾಗಿದೆ.

₹10 ಸಾವಿರ ಕೋಟಿ ವೆಚ್ಚದ ಈ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಕೇಂದ್ರದ ಕಾನೂನು ಸಚಿವ ರವಿಶಂಕರ್ ಪ್ರಸಾದ್‌ ತಿಳಿಸಿದ್ದಾರೆ.

ಗಗನಯಾನ ಯೋಜನೆ ಅಡಿಯಲ್ಲಿ ಮೂವರು ಗಗನಯಾನಿಗಳನ್ನು ಬಾಹ್ಯಕಾಶಕ್ಕೆ ಕಳುಹಿಸಿಕೊಡಲಾಗುವುದು. ಇವರು 7 ದಿನ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಲಿದ್ದಾರೆ. ಇದಕ್ಕಾಗಿ ಇಸ್ರೋ ವಿಶೇಷ ಬಾಹ್ಯಾಕಾಶ ನೌಕೆಯನ್ನು ಸಿದ್ಧ ಪಡಿಸಲಿದೆ.

2022ರಲ್ಲಿ ಭಾರತೀಯ ಗಗನಯಾನಿಗಳು ಬಾಹ್ಯಾಕಾಶ ಯಾತ್ರೆ ನಡೆಸಲಿದ್ದಾರೆ. ಇದಕ್ಕಾಗಿ ಗಗನಯಾನಿಗಳಿಗೆ ಮೂರು ವರ್ಷ ವಿಶೇಷ ತರಬೇತಿ ನೀಡಲಾಗುವುದು.

ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿಕೊಟ್ಟುವಿಶ್ವದ ನಾಲ್ಕನೇ ದೇಶ ಎಂಬ ಹಿರಿಮೆಗೆ ಭಾರತ ಪಾತ್ರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.