ADVERTISEMENT

ಪ್ರತಿಭಟನಾಕಾರರ ಮೇಲೆ ಹರಿದ ಟ್ರಕ್‌: ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 15:17 IST
Last Updated 8 ಏಪ್ರಿಲ್ 2022, 15:17 IST
   

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಚೆನಾನಿ ಪ್ರದೇಶದಲ್ಲಿ ಕುಡಿಯುವ ನೀರಿನ ಪೈಪ್‌ಗಳ ದುರಸ್ತಿಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಟ್ರಕ್‌ವೊಂದು ಹರಿದು ಮೂವರು ನಾಗರಿಕರು ಮೃತಪಟ್ಟಿದ್ದಾರೆ.

‘ಚಾಲಕನಿಗೆ ರಸ್ತೆಯಲ್ಲಿನ ತಿರುವು ಗೊತ್ತಾಗದ ಕಾರಣ ನಿಯಂತ್ರಣ ತಪ್ಪಿದ ಟ್ರಕ್‌ ಪ್ರತಿಭಟನಾಕಾರರ ಮೇಲೆ ಹರಿದಿದ್ದು, ಮೂವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಇತರೆ ಮೂವರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಘಟನೆಯ ಕುರಿತು ಜಿಲ್ಲಾಡಳಿತವು ತನಿಖೆಗೆ ಆದೇಶಿಸಿದೆ’ ಎಂದು ಉಧಂಪುರ ಜಿಲ್ಲಾಧಿಕಾರಿ ಇಂದುಚಿಬ್‌ ತಿಳಿಸಿದ್ದಾರೆ.

ವೈಷ್ಣೋದೇವಿ ದೇಗುಲ: ನವರಾತ್ರಿ ಉತ್ಸವದಲ್ಲಿ 1.76 ಲಕ್ಷ ಭಕ್ತರು ಭೇಟಿ

ADVERTISEMENT

ಜಮ್ಮು: ಇಲ್ಲಿನ ಕತ್ರಾ ಪಟ್ಟಣದ ಸಮೀಪದ ಪ್ರಸಿದ್ಧ ವೈಷ್ಣೋದೇವಿ ದೇಗುಲದಲ್ಲಿ ನವರಾತ್ರಿ ಉತ್ಸವದ ಮೊದಲ ಆರು ದಿನಗಳಲ್ಲಿ 1.76 ಲಕ್ಷ ಯಾತ್ರಾರ್ಥಿಗಳು ಭೇಟಿ ನೀಡಿದ್ದಾರೆ.

‘ನವರಾತ್ರಿಯ ಮೊದಲ ದಿನವಾದ ಏಪ್ರಿಲ್‌ 2ರಂದು 37,381, ಏ.3ರಂದು 33,340, ಏ.4ರಂದು 29,078, ಏ.5ರಂದು 27,302, ಏ.6ರಂದು 29,078, ಏ.7ರಂದು 20,000 ಯಾತ್ರಾರ್ಥಿಗಳು ಭೇಟಿ ನೀಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಪ್ರತಿನಿತ್ಯ ಸರಾಸರಿ 27 ಸಾವಿರ ಮಂದಿ ಭೇಟಿ ನೀಡುತ್ತಿದ್ದು, ಅಧಿಕಾರಿಗಳು ಕಟ್ಟುನಿಟ್ಟಿನ ಮೇಲಿಸ್ತುವಾರಿ ವಹಿಸಿದ್ದಾರೆ. ಹೊಸ ವರ್ಷದ ಮೊದಲ ಉಂಟಾದ ಕಾಲ್ತುಳಿತದಿಂದಾಗಿ 12 ಯಾತ್ರಾರ್ಥಿಗಳು ಮೃತಪಟ್ಟ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಎಲ್ಲ ರೀತಿಯ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದರು.

ಈ ನವರಾತ್ರಿ ಹಬ್ಬವು ಭಾನುವಾರ (ಏ.10) ‘ಮಹಾನವಮಿ’ಯಂದು ಪೂರ್ಣ ಆಹುತಿಯೊಂದಿಗೆ ಕೊನೆಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.