ADVERTISEMENT

33 ವರ್ಷಗಳ ಬಳಿಕ ಪತ್ನಿ ತ್ಯಜಿಸಿದ ಪತಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 19:30 IST
Last Updated 24 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಪತಿಯಿಂದ ಪರಿತ್ಯಕ್ತಳಾದ ಗೃಹಿಣಿಯೊಬ್ಬಳ ನೆರವಿಗೆ ಧಾವಿಸಿರುವ ಇಲ್ಲಿನ ಮೆಟ್ರೊಪಾಲಿಟನ್ ನ್ಯಾಯಾಲಯ, ಆಕೆಗೆ ಪ್ರತಿ ತಿಂಗಳು ರೂ 8,000 ಜೀವನಾಂಶ ನೀಡುವಂತೆ ಪತಿಗೆ ಸೂಚಿಸಿದೆ.

ಪತ್ನಿಯೊಂದಿಗೆ 33 ವರ್ಷಗಳ ಕಾಲ ದಾಂಪತ್ಯ (1978ರಲ್ಲಿ ವಿವಾಹ) ನಡೆಸಿದ ಪತಿ, 2010ರಲ್ಲಿ ಆಕೆಯನ್ನು ಮನೆಯಿಂದ ಹೊರಗೆ ಹಾಕಿದ. ಆದರೆ 33 ವರ್ಷ ಅವಧಿಯ ದಾಂಪತ್ಯದಲ್ಲಿ ತನಗೆ ಹಿಂಸೆ ನೀಡಲಾಗಿದೆ ಎಂದು ಪತ್ನಿ ಯಾವತ್ತೂ ದೂರಿಲ್ಲ ಎನ್ನುವುದರ ಬಗ್ಗೆ ನ್ಯಾಯಾಲಯ ಅಚ್ಚರಿ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.