ADVERTISEMENT

ಅಮೆರಿಕದಿಂದ ಗಡೀಪಾರು: ಅಹಮದಾಬಾದ್‌ ತಲುಪಿದ 33 ಮಂದಿ

ಪಿಟಿಐ
Published 6 ಫೆಬ್ರುವರಿ 2025, 11:16 IST
Last Updated 6 ಫೆಬ್ರುವರಿ 2025, 11:16 IST
ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಬಂದ ವಲಸಿಗರು –ಪಿಟಿಐ ಚಿತ್ರ
ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಬಂದ ವಲಸಿಗರು –ಪಿಟಿಐ ಚಿತ್ರ   

ಅಹಮದಾಬಾದ್: ಅಮೆರಿಕವು ವಾಪಸ್‌ ಕಳುಹಿಸಿದ 104 ಭಾರತೀಯರಲ್ಲಿ 33 ಮಂದಿ ಅಮೃತಸರದಿಂದ ಗುರುವಾರ ಬೆಳಿಗ್ಗೆ ವಿಮಾನದಲ್ಲಿ ಅಹಮದಾಬಾದ್‌ಗೆ ಬಂದಿಳಿದರು. 

‘ಮಹಿಳೆಯರು ಮತ್ತು ಮಕ್ಕಳು ಒಳಗೊಂಡಂತೆ ಅಹಮದಾಬಾದ್‌ಗೆ ತಲುಪಿದ ಎಲ್ಲರನ್ನೂ ಗುಜರಾತ್‌ ಪೊಲೀಸರ ವಾಹನದಲ್ಲಿ ಅವರ ಊರುಗಳಿಗೆ ಕಳುಹಿಸಿಕೊಡಲಾಯಿತು ಎಂದು ಎಸಿಪಿ (‘ಡಿ’ ವಿಭಾಗ) ಆರ್‌.ಡಿ.ಓಜಾ ತಿಳಿಸಿದರು.

ಅಮೆರಿಕವು ವಾಪಸ್‌ ಕಳುಹಿಸಿದ ವಲಸಿಗರನ್ನು ಮಾಧ್ಯಮ ಪ್ರತಿನಿಧಿಗಳು ಮಾತನಾಡಿಸಲು ಪ್ರಯತ್ನಿಸಿದರೂ ಅವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಪೊಲೀಸ್‌ ವಾಹನವನ್ನೇರಿ ತಮ್ಮ ಊರಿನತ್ತ ಪ್ರಯಾಣ ಬೆಳೆಸಿದರು.

ADVERTISEMENT

ಇವರಲ್ಲಿ ಹೆಚ್ಚಿನವರು ಮೆಹ್ಸಾನಾ, ಗಾಂಧಿನಗರ, ಪಠಾಣ್, ವಡೋದರ ಮತ್ತು ಖೇಡಾ ಜಿಲ್ಲೆಯವರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.