ADVERTISEMENT

37 ಕೋಟಿ ಜನರಿಗೆ ಮುದ್ರಾ ಯೋಜನೆಯಿಂದ ಸಾಲ ಸೌಲಭ್ಯ: ಬಿಜೆಪಿ

ಐಎಎನ್ಎಸ್
Published 9 ಫೆಬ್ರುವರಿ 2023, 12:02 IST
Last Updated 9 ಫೆಬ್ರುವರಿ 2023, 12:02 IST
ಬಿಜೆಪಿ
ಬಿಜೆಪಿ   

ಪಟ್ನಾ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಅಡಿಯಲ್ಲಿ 37 ಕೋಟಿ ಜನರಿಗೆ ಸಾಲ ಸೌಲಭ್ಯ ನೀಡಲಾಗಿದೆ ಎಂದು ಬಿಹಾರ ಬಿಜೆಪಿಯ ಐಟಿ ಘಟಕದ ಸಂಚಾಲಕ ಮನನ್ ಕೃಷ್ಣ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಆದರೆ ಕಳೆದ 9 ವರ್ಷಗಳಲ್ಲಿ ಯುವಕರಿಗೆ 18 ಕೋಟಿ ಉದ್ಯೋಗಗಳು ಎಲ್ಲಿವೆ? ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಲಲನ್ ಸಿಂಗ್ ಪ್ರಶ್ನೆ ಮಾಡಿದ್ದರು. ಮನನ್ ಕೃಷ್ಣ ಅವರು 37 ಕೋಟಿ ಜನರು ಪಿಎಂಎಂವೈ ಯೋಜನೆಯಿಂದ ಪ್ರಯೋಜನಾ ಪಡೆದಿದ್ದಾರೆ ಎಂದು ಲಲನ್‌ ಸಿಂಗ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮುದ್ರಾ ಯೋಜನೆಯಡಿ 37 ಕೋಟಿಗೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ. ಇವರು ವ್ಯವಹಾರ ಮಾಡುತ್ತಿರುವುದು ಮಾತ್ರವಲ್ಲದೇ ಇತರರಿಗೆ ಉದ್ಯೋಗ ಕೊಡುತ್ತಿದ್ದಾರೆ. ಇದು ಉದ್ಯೋಗ ಸೃಷ್ಟಿ ಅಲ್ಲದೇ ಮತ್ತೇನು? ಎಂದು ಲಲನ್‌ ಸಿಂಗ್‌ ಅವರನ್ನು ಕೇಳಿದ್ದಾರೆ.

ADVERTISEMENT

‘ಆತ್ಮನಿರ್ಭರ ಭಾರತ್‘ ಯೋಜನೆ ಅಡಿಯಲ್ಲಿ 46 ಲಕ್ಷ ಜನರು ತಮ್ಮದೇ ಆದ ವ್ಯವಹಾರ ಘಟಕಗಳನ್ನು ಸ್ಥಾಪನೆ ಮಾಡಿದ್ದಾರೆ. ಇವರು ಹಲವಾರು ಜನರಿಗೆ ಉದ್ಯೋಗಗಳನ್ನು ನೀಡಿದ್ದಾರೆ.

ಕೇಂದ್ರ ಸರ್ಕಾರ ಈ ವರ್ಷ 10 ಲಕ್ಷ ಜನರಿಗೆ ಉದ್ಯೋಗ ನೀಡಲು ಪ್ರಾರಂಭಿಸಿದೆ. ಉದ್ಯೋಗ ಭವಿಷ್ಯ ನಿಧಿ (ಇಪಿಎಫ್ಒ)ಯಲ್ಲಿ ಮಾಸಿಕ ಸರಾಸರಿ 15 ಲಕ್ಷ ಹೊಸ ಖಾತೆಗಳನ್ನು ತೆರೆಯಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಕಳೆದ ಅಕ್ಟೋಬರ್‌ನಲ್ಲಿ 12.94 ಲಕ್ಷ, ಸೆಪ್ಟೆಂಬರ್‌ನಲ್ಲಿ 15.42 ಲಕ್ಷ, ಆಗಸ್ಟ್‌ನಲ್ಲಿ 16.94 ಲಕ್ಷ, ಜುಲೈನಲ್ಲಿ 18.23 ಲಕ್ಷ, ಜೂನ್‌ನಲ್ಲಿ 18.36 ಲಕ್ಷ, ಮೇನಲ್ಲಿ 16.82 ಲಕ್ಷ ಜನರು ಇಪಿಎಫ್ಒ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.