ರಾಮಗುಂಡಂ: ಉತ್ತರ ತೆಲಂಗಾಣದ ರಾಮಗುಂಡಂ ಬಳಿ ಸಿಂಗರೇನಿ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ ಸಂಭವಿಸಿದ್ದು ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ.
ಸ್ಫೋಟವುಂಟಾಗಲು ಕಾರಣ ಏನು ಎಂಬುದು ಇಲ್ಲಿಯರೆಗೆ ಸ್ಪಷ್ಟವಾಗಿಲ್ಲ. ಕಲ್ಲಿದ್ದಲು ಗಣಿಯಲ್ಲಿ ಸ್ಫೋಟಕ ವಸ್ತುಗಳನ್ನು ಬಳಸಲಾಗುತ್ತದೆ. ಕಲ್ಲಿದ್ದಲು ರಾಶಿಯಲ್ಲಿ ಸಣ್ಣ ತೂತು ಕೊರೆದು ಅದರಲ್ಲಿ ಸ್ಫೋಟಕಗಳನ್ನಿಟ್ಟು ಸ್ಫೋಟಿಸಲಾಗುತ್ತದೆ. ಹೀಗೆ ಸ್ಫೋಟಿಸುವ ಹೊತ್ತಲ್ಲಿ ಅವಘಡವುಂಟಾಗಿದೆ.
ಈ ಅವಘಡದಲ್ಲಿ 6 ಮಂದಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಗೋದಾವರಖನಿ ಸಿಂಗರೇನಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.