ADVERTISEMENT

ಜೊಜಿಲಾ ಸುರಂಗ ಮಾರ್ಗ ಶೇ 40 ಪೂರ್ಣ; ಕಾಮಗಾರಿ ಗಡುವು 2030ಕ್ಕೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 14:44 IST
Last Updated 30 ಜುಲೈ 2023, 14:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ದ್ರಾಸ್‌(ಲಡಾಖ್‌): ಕಾಶ್ಮೀರ ಕಣಿವೆ ಮತ್ತು ಲಡಾಖ್ ಪ್ರದೇಶದ ನಡುವೆ ಸಂಪರ್ಕ ಕಲ್ಪಿಸುವ ಸರ್ವ ಋತುವಿನ ಜೊಜಿಲಾ ಸುರಂಗ ಮಾರ್ಗವನ್ನು ಪೂರ್ಣಗೊಳಿಸುವ ಗಡುವನ್ನು 2030ರ ಡಿಸೆಂಬರ್‌ ಮುಂದೂಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಷ್ಯಾದ ಅತಿ ಉದ್ದದ ದ್ವಿಮುಖ ಸಂಚಾರ ವ್ಯವಸ್ಥೆಯ ಸುರಂಗ ಮಾರ್ಗವನ್ನು ಏಷ್ಯಾದ ಅತಿ ಎತ್ತರದ ಸ್ಥಳದಲ್ಲಿರುವ ಲಡಾಖ್‌ ಪ್ರಾಂತದ ಜೊಜಿಲಾ ಪ್ರಾಂತ್ಯದಲ್ಲಿ ನಿರ್ಮಿಸಲಾಗುತ್ತಿದೆ.

‘ಇದು ತೀವ್ರ ಹಿಮಕುಸಿತ ಪೀಡಿತ ಪ್ರದೇಶ. ಹವಾಮಾನ ಮತ್ತು ಭೂಪ್ರದೇಶದಲ್ಲಿ ಉಂಟಾಗುವ ಪ್ರತಿಕೂಲ ಪರಿಸ್ಥಿತಿಯಿಂದಾಗಿ ಕಾಮಗಾರಿಯನ್ನು ಹಲವು ಬಾರಿ ಸ್ಥಗಿತಗೊಳಿಸಬೇಕಾಯಿತು. ಡಿಸೆಂಬರ್ 2026 ರೊಳಗೆ ಸುರಂಗವನ್ನು ಪೂರ್ಣಗೊಳಿಸಬೇಕಿತ್ತು. ಆದರೆ ಈಗ, ಈ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಕಾಮಗಾರಿ ಪೂರ್ಣಗೊಳಿಸುವ ಗಡುವನ್ನು ಪರಿಷ್ಕರಿಸಲಾಗಿದೆ’ ಎಂದು ಬಾರ್ಡರ್ ರೋಡ್ಸ್ ಆರ್ಗನೈಸೇಶನ್‌ನ ಕ್ಯಾಪ್ಟನ್ ಐ.ಕೆ. ಸಿಂಗ್ ತಿಳಿಸಿದರು.

ADVERTISEMENT

‘13 ಕಿ.ಮೀ ಉದ್ದದ ಸುರಂಗದ ಕಾಮಗಾರಿ ಈಗಾಗಲೇ ಶೇ.40ರಷ್ಟು ಮುಗಿದಿದೆ. ಈ ಸುರಂಗ ಮಾರ್ಗವು ಜೊಜಿಲಾ ಪಾಸ್ ಅನ್ನು ದಾಟುವ ಸಮಯವನ್ನು ನಾಲ್ಕು ಗಂಟೆಗಳಿಂದ ಕೇವಲ 15 ನಿಮಿಷಕ್ಕೆ ತಗ್ಗಿಸಲಿದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.