ADVERTISEMENT

ಅಮರನಾಥ ಯಾತ್ರೆ: ಜೂನ್‌ 30 ರಿಂದ ಆರಂಭ

ಪಿಟಿಐ
Published 27 ಮಾರ್ಚ್ 2022, 11:36 IST
Last Updated 27 ಮಾರ್ಚ್ 2022, 11:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಮ್ಮು: ಅಮರನಾಥ ದೇವಾಲಯಕ್ಕೆ ವಾರ್ಷಿಕ 43 ದಿನಗಳ ತೀರ್ಥಯಾತ್ರೆಯು ಜೂನ್‌ 30 ರಿಂದ ಆರಂಭವಾಗುವುದು ಎಂದು ಅಧಿಕಾರಿಯೊಬ್ಬರು ಭಾನುವಾರ ಹೇಳಿದ್ದಾರೆ.

ಲೆಫ್ಟಿನೆಂಟ್‌ ಗೌರ್ನರ್‌ ಮನೋಜ್‌ ಸಿನ್ಹ ಅವರ ಅಧ್ಯಕ್ಷತೆಯಲ್ಲಿ ನಡೆದ ಶ್ರೀ ಅಮರನಾಥ ದೇವಾಲಯ ಮಂಡಳಿಯ ಸಭೆಯು ಈ ನಿರ್ಧಾರ ಕೈಗೊಂಡಿದೆ.

‘ ಕೋವಿಡ್‌ ಮಾರ್ಗಸೂಚಿಗಳ ಅನುಸರಣೆಯೊಂದಿಗೆ ತೀರ್ಥಯಾತ್ರೆಯು ಜೂನ್‌ 30 ರಿಂದ ಆರಂಭವಾಗಿ ಸಂಪ್ರದಾಯದಂತೆ ರಕ್ಷಾ ಬಂಧನದ ದಿನ ಮುಕ್ತಾಯಗೊಳ್ಳುತ್ತದೆ’ ಎಂದು ಮನೋಜ್‌ ಸಿನ್ಹ ಟ್ವೀಟ್‌ ಮಾಡಿದ್ದಾರೆ.

ADVERTISEMENT

2019ರ ಆಗಸ್ಟ್‌ನಲ್ಲಿ 370ನೇ ವಿಧಿಯನ್ನು ತೆಗೆದುಹಾಕುವುದಕ್ಕೂ ಮುನ್ನ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿತ್ತು. ಕಳೆದ ಎರಡು ವರ್ಷಗಳಿಂದ ಕೋವಿಡ್‌ ಕಾರಣದಿಂದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.