ADVERTISEMENT

ದೇಶದ ಜೈಲುಗಳಲ್ಲಿ 4.83 ಲಕ್ಷ ಭಾರತೀಯ ಕೈದಿಗಳು

ಪಿಟಿಐ
Published 3 ಫೆಬ್ರುವರಿ 2022, 15:21 IST
Last Updated 3 ಫೆಬ್ರುವರಿ 2022, 15:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 2020ರ ಅಂತ್ಯದ ವೇಳೆಗೆ ದೇಶದ ವಿವಿಧ ಜೈಲುಗಳಲ್ಲಿ ಒಟ್ಟು4.83 ಲಕ್ಷ ಭಾರತೀಯ ಪ್ರಜೆಗಳು ಬಂಧನದಲ್ಲಿದ್ದರು. ಈ ಪೈಕಿ ಶೇಕಡ 76ಕ್ಕಿಂತ ಹೆಚ್ಚು ವಿಚಾರಣಾಧೀನ ಕೈದಿಗಳು ಹಾಗೂ ಶೇಕಡ 28 ರಷ್ಟು ಅಪರಾಧಿಗಳು ಇದ್ದರು ಎಂದು ಸರ್ಕಾರದ ಹೊಸ ಅಂಕಿಅಂಶಗಳು ಹೇಳಿವೆ.

‘ಇದರಲ್ಲಿ 3,549 ಮಂದಿ ರಾಜಕೀಯ ಕೈದಿಗಳಾಗಿದ್ದಾರೆ. ದೇಶದ ಜೈಲುಗಳಲ್ಲಿ ಒಟ್ಟು4,926 ವಿದೇಶಿ ಮೂಲದ ಕೈದಿಗಳೂ ಇದ್ದಾರೆ’ ಎಂದುರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ತನ್ನ ‘ಪ್ರಿಸನ್‌ ಸ್ಟ್ಯಾಟಿಸಿಕ್ಟ್‌ ಇಂಡಿಯಾ 2020’ ವಾರ್ಷಿಕ ವರದಿಯಲ್ಲಿ ಹೇಳಿದೆ.

‘ಜೈಲುಗಳಲ್ಲಿ ಬಂಧಿಯಾಗಿರುವ ವಿಚಾರಣಾಧೀನ ಕೈದಿಗಳಲ್ಲಿ ಹೆಚ್ಚಿನವರು 18-30 ವರ್ಷದವರಾಗಿದ್ದರೆ, ಹೆಚ್ಚಿನ ಅಪರಾಧಿಗಳು 30-50 ವಯಸ್ಸಿನವರಾಗಿದ್ದಾರೆ.ಒಟ್ಟು ಕೈದಿಗಳಲ್ಲಿ 1.11 ಲಕ್ಷ (ಶೇಕಡ 23.04) ಅಪರಾಧಿಗಳು, 3.68 ಲಕ್ಷ (ಶೇಕಡ 76.17)ವಿಚಾರಣಾಧೀನ ಕೈದಿಗಳು ಮತ್ತು 3,549 (ಶೇಕಡ 0.73) ರಾಜಕೀಯ ಕೈದಿಗಳು ಇದ್ದಾರೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

‘4.83 ಲಕ್ಷ ಕೈದಿಗಳ ಪೈಕಿ ಶೇಕಡ 96 ರಷ್ಟು ಪುರುಷರು, ಶೇಕಡ 3.98 ರಷ್ಟು ಮಹಿಳೆಯರು ಹಾಗೂ ಶೇಕಡ0.01 ರಷ್ಟುಲೈಂಗಿಕ ಅಲ್ಪಸಂಖ್ಯಾತರು ಇದ್ದಾರೆ. ಉತ್ತರ ಪ್ರದೇಶ (1.06 ಲಕ್ಷ) ಅತಿ ಹೆಚ್ಚು ಕೈದಿಗಳನ್ನು ಹೊಂದಿದ್ದರೆ, ಬಿಹಾರ (51,849) ಮತ್ತು ಮಧ್ಯಪ್ರದೇಶ (45,456) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನವನ್ನು ಹೊಂದಿದೆ’ ಎಂದುಎನ್‌ಸಿಆರ್‌ಬಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.