ADVERTISEMENT

485 ವರ್ಷಗಳಿಂದ ಬೆಳಗುತ್ತಿರುವ ದೀಪ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2012, 19:30 IST
Last Updated 19 ಆಗಸ್ಟ್ 2012, 19:30 IST

ಜೊರಾತ್ (ಅಸ್ಸಾಂ)(ಪಿಟಿಐ): ಇಲ್ಲಿನ ವೈಷ್ಣವ ಪಂಥದ ದೇವಾಲಯದಲ್ಲಿ ಕಳೆದ 485 ವರ್ಷಗಳಿಂದ ಬೆಳಗುತ್ತಿರುವ ಎಣ್ಣೆ ದೀಪ ಏಷ್ಯಾ ದಾಖಲೆ ಪುಸ್ತಕಕ್ಕೆ ಸೇರ್ಪಡೆಗೊಂಡಿದೆ.

ಜೊರಾತ್ ಸಮೀಪದ  ದೇಕಿಯಖೋವಾ ಬೊರ್ ನಂಘಾರ್‌ನ ದೇವಾಲಯದಲ್ಲಿ 485 ವರ್ಷಗಳಿಂದ ಈ ಪವಿತ್ರ ದೀಪ ಬೆಳಗುತ್ತಿದೆ. 1528 ರಲ್ಲಿ  ಈ ಜ್ಯೋತಿಯನ್ನು ಬೆಳಗಿಸಲಾಗಿತ್ತು. ಅಂದಿನಿಂದ ಉರಿಯುತ್ತಿರುವ ಈ ದೀಪ ಎಂದು ಕೂಡ ನಂದಿ ಹೋಗಿಲ್ಲ.  ಸ್ಥಳೀಯರು ಉರಿಯುವಂತೆ ನೋಡಿಕೊಂಡಿದ್ದಾರೆ.

ಇತ್ತೀಚೆಗೆ ಜೊರಾತ್‌ನ ಸಂಸದ ಬಿಜೊಯ್ ಕೃಷ್ಣ ಹಂಡಿಕ್ ಅವರಿಗೆ ಈ ದೀಪ ದಾಖಲೆಗೆ ಸೇರ್ಪಡೆಯಾದುದರ ಪತ್ರ ನೀಡಲಾಯಿತು ಎಂದು ದೇವಸ್ಥಾನ ಮಂಡಳಿಯ ಮೂಲಗಳು ತಿಳಿಸಿವೆ.

ಅಸ್ಸಾಂನ ಖ್ಯಾತ ಧಾರ್ಮಿಕ ಸಂತ ಮಧ್ವಾದೇವಾ ಮತ್ತು  ಶ್ರಿಮಂಥ ಶಂಕರದೇವಾ ಅವರು ನಂಘಾರ್ ದೇವಾಲಯವನ್ನು 1528 ರಲ್ಲಿ ನಿರ್ಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.