ADVERTISEMENT

ಆಗಸ್ಟ್ 15ರ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ 4ಜಿ ನಿರ್ಬಂಧ ತೆರವು: ಕೇಂದ್ರ  

ಪಿಟಿಐ
Published 11 ಆಗಸ್ಟ್ 2020, 7:48 IST
Last Updated 11 ಆಗಸ್ಟ್ 2020, 7:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಆಗಸ್ಟ್ 15ರ ನಂತರ ಜಮ್ಮು ಮತ್ತು ಕಾಶ್ಮೀರದ ನಿಗದಿತ ಪ್ರದೇಶಗಳಲ್ಲಿ ಇಂಟರ್ನೆಟ್ ನಿರ್ಬಂಧ ತೆರವುಗೊಳಿಸಿ 4ಜಿ ಮರುಸ್ಥಾಪನೆ ನೀಡುವ ಬಗ್ಗೆ ವಿಶೇಷ ಸಮಿತಿ ಚಿಂತನೆ ನಡೆಸಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಹೇಳಿದೆ.

ಪ್ರಾಯೋಗಿಕ ಆಧಾರದ ಮೇಲೆ ನಿರ್ಬಂಧ ತೆರವುಗೊಳಿಸಲಾಗುವುದು ಎಂದು ಕೇಂದ್ರ ಹೇಳಿದೆ.

ಕೇಂದ್ರದ ಪರವಾಗಿ ಸುಪ್ರೀಂಕೋರ್ಟ್‍ಗೆಹಾಜರಾದ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್, ಜಮ್ಮು ಕಾಶ್ಮೀರ ವಿಭಾಗದಲ್ಲಿ ಒಂದೊಂದು ಜಿಲ್ಲೆಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಇಂಟರ್ನೆಟ್ ಮರುಸ್ಥಾಪನೆ ಮಾಡಲು ಸಮಿತಿ ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 4 ಜಿ ಸೌಲಭ್ಯವನ್ನು ನಿಶ್ಚಿತ ವಿಧಾನ ಮತ್ತು ಪ್ರಾಯೋಗಿಕ ರೀತಿಯಲ್ಲಿ ನೀಡಿಎರಡು ತಿಂಗಳ ಬಳಿಕ ಸಮಿತಿ ಅದನ್ನು ಪರಿಶೀಲಿಸಲಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಕೇಂದ್ರ ಮತ್ತು ಜಮ್ಮು ಕಾಶ್ಮೀರ ಆಡಳಿತ ವ್ಯವಸ್ಥೆ ಕಡೆಯಿಂದ ಇದು ಉತ್ತಮ ನಡೆಎಂದು ನ್ಯಾಯಮೂರ್ತಿ ಆರ್.ಸುಭಾಶ್ ರೆಡ್ಡಿ ಮತ್ತು ಬಿ.ಆರ್.ಗವಾಯಿ ಅವರ ನ್ಯಾಯಪೀಠ ಹೇಳಿದೆ.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದ ನಂತರ ಅಲ್ಲಿ ಹೈಸ್ಪೀಡ್ ಇಂಟರ್ನೆಟ್ ಸಂಪರ್ಕ ರದ್ದು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.