ADVERTISEMENT

5 ಗಂಟೆಗಳ ಕಾಲ ಮಹಿಳೆಯ ಮೂಗಿನಲ್ಲಿದ್ದ ಜೀವಂತ ಜಿರಲೆಯನ್ನು ಹೊರತೆಗೆದ ವೈದ್ಯರು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 11:54 IST
Last Updated 3 ಫೆಬ್ರುವರಿ 2017, 11:54 IST
5 ಗಂಟೆಗಳ ಕಾಲ ಮಹಿಳೆಯ ಮೂಗಿನಲ್ಲಿದ್ದ  ಜೀವಂತ ಜಿರಲೆಯನ್ನು ಹೊರತೆಗೆದ ವೈದ್ಯರು
5 ಗಂಟೆಗಳ ಕಾಲ ಮಹಿಳೆಯ ಮೂಗಿನಲ್ಲಿದ್ದ ಜೀವಂತ ಜಿರಲೆಯನ್ನು ಹೊರತೆಗೆದ ವೈದ್ಯರು   

ಚೆನ್ನೈ: ಕಿವಿಯಲ್ಲಿ ಅಥವಾ ಮೂಗಿನಲ್ಲಿ ಒಂದು ಸಣ್ಣ ಇರುವೆ ಹೊಕ್ಕರೂ ಕಿರಿ ಕಿರಿ ಮತ್ತು  ಹಿಂಸೆಯಾಗುತ್ತದೆ. ಆದರೆ ಜೀವಂತ ಜಿರಲೆ ಮೂಗಿನಲ್ಲಿ ಹೊಕ್ಕು ತಲೆಯನ್ನು ಸೇರಿದರೆ ಅವರ ಪರಿಸ್ಥಿತಿ ಏನಾಗಿರಬೇಡ!

ಹೌದು!  ಇಲ್ಲಿನ ಇಂಜಾಮ್‌ಬಾಕಮ್‌  ಪ್ರದೇಶದ ನಿವಾಸಿ ಸೆಲ್ವಿ(42) ಎಂಬುವರ   ಮೂಗಿನ ಗೂಡಿನಲ್ಲಿದ್ದ ಜಿರಲೆಯನ್ನು ವೈದ್ಯರು ಜೀವಂತವಾಗಿ ಹೊರತೆಗೆದಿದ್ದಾರೆ.

ಅಚಾನಕ್ಕಾಗಿ ಜಿರಲೆ ಸೆಲ್ವಿಯವರ  ಮೂಗಿನ ಹೊಳ್ಳೆ ಸೇರಿದೆ. ಅವರು ಉಸಿರನ್ನು ಒಳ ತೆಗೆದುಕೊಂಡಾಗ ಅದು ಮೂಗಿನ ಗೂಡನ್ನು   (ಮಿದುಳಿನ ಹಿಂಭಾಗ ಅಥವಾ ತಲೆ) ಸೇರಿತ್ತು ಎಂದು ಸ್ಟಾನ್‌ಲೇ  ಸರ್ಕಾರಿ ವೈದ್ಯರು ತಿಳಿಸಿದ್ದಾರೆ.

ADVERTISEMENT

ಜಿರಲೆ ದೊಡ್ಡ ಗಾತ್ರದಲ್ಲಿ ಇದುದ್ದರಿಂದ ಅದನ್ನು ಹೊರ ತೆಗೆಯುವುದು ಕಷ್ಟವಾಗಿತ್ತು. ವಿವಿಧ  ಚಿಕಿತ್ಸೆಗಳನ್ನು   ಪ್ರಯತ್ನಿಸಿದರೂ ಜಿರಲೆ ಹೊರತೆಗೆಯುವುದು ಕಷ್ಟವಾಗಿತ್ತು   ಎಂದು ವೈದ್ಯರು ತಿಳಿಸಿದ್ದಾರೆ. ನಂತರ  ನಾಸೆಲ್ ಎಂಡೋಸ್ಕೊಫಿ ಮಾಡುವ ಮೂಲಕ ಜೀವಂತವಾಗಿದ್ದ ಜಿರಲೆಯನ್ನು ಹೊರ ತೆಗೆಯಲಾಯಿತು.

ಮಹಿಳೆ ಸೆಲ್ವಿ  ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.