ADVERTISEMENT

ಹಣ ವರ್ಗಾವಣೆ: ಗಾಯಕನಿಗೆ ಇ.ಡಿ ನೋಟಿಸ್

ಪಿಟಿಐ
Published 30 ಜನವರಿ 2019, 18:50 IST
Last Updated 30 ಜನವರಿ 2019, 18:50 IST

ನವದೆಹಲಿ: ವಿದೇಶಿ ಹಣಕಾಸು ಅಕ್ರಮ ವರ್ಗಾವಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಗಾಯಕ ರಾಹತ್ ಫತೇ ಅಲಿ ಖಾನ್‌ಗೆ ಜಾರಿ ನಿರ್ದೇಶನಾಲಯ ಬುಧವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ವಿದೇಶಿ ವಿನಿಯಮ ನಿರ್ವಹಣಾ ಕಾಯ್ದೆ(ಫೆಮಾ) ಉಲ್ಲಂಘಿಸಿ ₹ 2 ಕೋಟಿ ಮೊತ್ತದ ವಿದೇಶಿ ಕರೆನ್ಸಿಯನ್ನು ವಿನಿಮಯ ಮಾಡಿದ ಆರೋಪದಲ್ಲಿ ತನಿಖೆ ಪೂರ್ಣಗೊಳಿಸಿ ನೋಟಿಸ್ ನೀಡಲಾಗಿದೆ. 45 ದಿನಗಳಲ್ಲಿ ಉತ್ತರ ನೀಡಲು ತಿಳಿಸಲಾಗಿದೆ ಎಂದು ಇ.ಡಿ ಅಧಿಕಾರಿಗಳು ಹೇಳಿದರು.

2011ರಲ್ಲಿ ಖಾನ್ ಮತ್ತು ಅವರ ವ್ಯವಸ್ಥಾಪಕ ಮರುಫ್ ಅಲಿ ಖಾನ್ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ₹88.28 ಲಕ್ಷ (ಯುಎಸ್‌ಡಿ 1.24 ಲಕ್ಷ) ಮತ್ತು ಹಲವು ವಿದೇಶಿ ಉಪಕರಣಗಳ ಜೊತೆಗೆಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದರು.

ADVERTISEMENT

‘ನಾನು ಯಾವುದೇ ತಪ್ಪು ಮಾಡಿಲ್ಲ. ಗುಂಪಿನೊಂದಿಗೆ ಪ್ರಯಾಣ ಮಾಡುತ್ತಿದ್ದ ಕಾರಣ ಜಾಸ್ತಿ ಹಣ ಇಟ್ಟುಕೊಂಡಿದ್ದೆ’ ಎಂದು ಇ.ಡಿ ತನಿಖೆ ವೇಳೆ ರಾಹತ್ ಹೇಳಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.