ADVERTISEMENT

ಬಿಸಿಲಿಗೆ ಉತ್ತರ ತತ್ತರ: 50 ಡಿಗ್ರಿ ಸೆಲ್ಸಿಯಸ್‌ ಮೀರಿದ ತಾಪಮಾನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 20:00 IST
Last Updated 3 ಜೂನ್ 2019, 20:00 IST
...
...   

ನವದೆಹಲಿ: ಉತ್ತರ ಭಾರತದ ಹಲವು ರಾಜ್ಯಗಳು ಸುಡು ಬಿಸಿಲು ಮತ್ತು ಬಿಸಿಗಾಳಿಗೆ ತತ್ತರಿಸಿವೆ. ಮುಂದಿನ ಐದು ದಿನಗಳಲ್ಲಿ ಉಷ್ಣಾಂಶ ಇನ್ನಷ್ಟು ಏರಿಕೆಯಾಗುವ ಅಥವಾ ಯಥಾಸ್ಥಿತಿ ಮುಂದುವರಿಯುವ ಸೂಚನೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಸೋಮವಾರ ಬೆಳಿಗ್ಗೆ ದಾಖಲಾಗಿ ರುವಂತೆ ಕಳೆದ 24 ಗಂಟೆಗಳಲ್ಲಿ ದಿನದ ಗರಿಷ್ಠ ತಾಪಮಾನ ಪೂರ್ವ ರಾಜಸ್ಥಾನದ ಚುರುವಿನಲ್ಲಿ 48.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಭಾನುವಾರ ಬೆಳಿಗ್ಗೆ ಇಲ್ಲಿ ದಾಖಲಾಗಿದ್ದ ಗರಿಷ್ಠ ಉಷ್ಣಾಂಶ 50.8 ಡಿಗ್ರಿ ಸೆಲ್ಸಿಯಸ್‌.

ಮುಂದಿನ 24 ಗಂಟೆಗಳ ಅವಧಿಯಲ್ಲಿ ಉತ್ತರ ಭಾರತದರಾಜ್ಯಗಳಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತಲೂ ಗರಿಷ್ಠ 5.1 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ 3.1 ಡಿಗ್ರಿ ಸೆಲ್ಸಿಯಸ್‌ವರೆಗೂ ಏರಿಕೆಯಾಗಬಹುದು.

ADVERTISEMENT

ಮುನ್ನೆಚ್ಚರಿಕೆ

ಕರ್ನಾಟಕದ ಉತ್ತರದ ಜಿಲ್ಲೆಗಳು, ನೆರೆ ರಾಜ್ಯಗಳು ಸೇರಿ ಉಷ್ಣಾಂಶ ಅಧಿಕವಾಗಿರುವ ರಾಜ್ಯಗಳಲ್ಲಿ ಮುಂದಿನ ಎರಡು–ಮೂರು ದಿನ ತಾಪಮಾನ ಇನ್ನಷ್ಟು ಏರಲಿದೆ. ಸಹಜ ಆರೋಗ್ಯದ ಜನರು ಈ ತಾಪಮಾನವನ್ನು ಸಹಿಸಿಕೊಳ್ಳಬಹುದು. ಆದರೆ, ವಯಸ್ಕರು, ಮಕ್ಕಳು, ಅನಾರೋಗ್ಯಪೀಡಿತರು ಆದಷ್ಟು ನೆರಳಿನ ಆಶ್ರಯದಲ್ಲಿ ಇರುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.