ADVERTISEMENT

ಎನ್‌ಆರ್‌ಸಿ ಮೊದಲ ಕರಡು ಪಟ್ಟಿ ಪ್ರಕಟ: ಅಸ್ಸಾಂನ 1.9 ಕೋಟಿ ಜನರಿಗೆ ಅಧಿಕೃತ ನಾಗರಿಕ ಮಾನ್ಯತೆ

ಪಿಟಿಐ
Published 1 ಜನವರಿ 2018, 6:04 IST
Last Updated 1 ಜನವರಿ 2018, 6:04 IST
ಎನ್‌ಆರ್‌ಸಿ ಮೊದಲ ಕರಡು ಪಟ್ಟಿ ಪ್ರಕಟ: ಅಸ್ಸಾಂನ 1.9 ಕೋಟಿ ಜನರಿಗೆ ಅಧಿಕೃತ ನಾಗರಿಕ ಮಾನ್ಯತೆ
ಎನ್‌ಆರ್‌ಸಿ ಮೊದಲ ಕರಡು ಪಟ್ಟಿ ಪ್ರಕಟ: ಅಸ್ಸಾಂನ 1.9 ಕೋಟಿ ಜನರಿಗೆ ಅಧಿಕೃತ ನಾಗರಿಕ ಮಾನ್ಯತೆ   

ಗುವಾಹತಿ: ರಾಷ್ಟ್ರೀಯ ನಾಗರಿಕ ನೋಂದಣಿ(ಎನ್‌ಆರ್‌ಸಿ)ಯ ಮೊದಲ ಕರಡು ಪಟ್ಟಿ ಬಿಡುಗಡೆಯಾಗಿದ್ದು, ಅಸ್ಸಾಂನ 1.9 ಕೋಟಿ ಜನರನ್ನು ಅಧಿಕೃತವಾಗಿ ಭಾರತದ ನಾಗರಿಕರು ಎಂದು ಮಾನ್ಯ ಮಾಡಲಾಗಿದೆ.

ಭಾನುವಾರ ಮಧ್ಯರಾತ್ರಿ ಎನ್‌ಆರ್‌ಸಿ ಕರಡು ಪಟ್ಟಿ ಬಿಡುಗಡೆ ಮಾಡಲಾಗಿದೆ. ಒಟ್ಟು 3.29 ಕೋಟಿ ಜನರ ಪೈಕಿ 1.9 ಕೋಟಿ ಜನರನ್ನು ಭಾರತೀಯ ನಾಗರಿಕರೆಂದು ಅಧಿಕೃತವಾಗಿ ಗುರುತಿಸಲಾಗಿದ್ದು, ಉಳಿದ ಹೆಸರುಗಳು ವಿವಿಧ ಹಂತಗಳ ಪರಿಶೀಲನೆಯಲ್ಲಿವೆ ಎಂದು ರೆಜಿಸ್ಟ್ರಾರ್‌ ಜನರಲ್‌ ಆಫ್‌ ಇಂಡಿಯಾ ಶೈಲೇಶ್‌ ಹೇಳಿದರು.

ಪ್ರಸ್ತುತ ಪರಿಶೀಲನೆ ಪೂರ್ಣಗೊಳಿಸಲಾಗದ ನಾಗರಿಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಉಳಿದ ಹೆಸರುಗಳ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಮತ್ತೊಂದು ಕರಡು ಪಟ್ಟಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ADVERTISEMENT

2015ರಲ್ಲಿ ಪ್ರಾರಂಭಿಸಲಾದ ದಾಖಲೆ ಪರಿಶೀಲನಾ ಪ್ರಕ್ರಿಯೆಗಾಗಿ ಅಸ್ಸಾಂನ 68.27 ಕುಟುಂಬಗಳಿಂದ 6.5 ಕೋಟಿ ದಾಖಲೆಗಳು ಸಲ್ಲಿಕೆಯಾಗಿವೆ. ಸುಪ್ರೀಂಕೋರ್ಟ್‌ ಆದೇಶದಂತೆ ಡಿ.31ರೊಳಗೆ ಎನ್‌ಆರ್‌ಸಿ ಮೊದಲ ಕರಡು ಪಟ್ಟಿ ಪ್ರಕಟಿಸಲಾಗಿದೆ.

ಅಸ್ಸಾಂನ ಎನ್‌ಆರ್‌ಸಿ ಸೇವಾ ಕೇಂದ್ರಗಳಲ್ಲಿ ಪಟ್ಟಿ ಲಭ್ಯವಿದ್ದು, ಅಲ್ಲಿನ ನಾಗರಿಕರು ಪಟ್ಟಿಯಲ್ಲಿ ಹೆಸರು ಪರಿಶೀಲಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.