ADVERTISEMENT

ತ್ರಿವಳಿ ತಲಾಖ್‌ ಪ್ರಕರಣದ ಇಶ್ರತ್‌ ಬಿಜೆಪಿಗೆ

ಏಜೆನ್ಸೀಸ್
Published 1 ಜನವರಿ 2018, 19:48 IST
Last Updated 1 ಜನವರಿ 2018, 19:48 IST
ಬಿಜೆಪಿ ಧ್ವಜ ನೀಡಿ ಇಶ್ರತ್‌ ಜಹಾನ್‌ ಅವರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು.
ಬಿಜೆಪಿ ಧ್ವಜ ನೀಡಿ ಇಶ್ರತ್‌ ಜಹಾನ್‌ ಅವರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು.   

ಕೋಲ್ಕತ್ತ: ತ್ರಿವಳಿ ತಲಾಖ್‌ ಪ್ರಕರಣದ ಐವರು ಅರ್ಜಿದಾರರಲ್ಲಿ ಒಬ್ಬರಾಗಿರುವ ಇಶ್ರತ್‌ ಜಹಾನ್‌ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಪಶ್ಚಿಮ ಬಂಗಾಳದ ಬಿಜೆಪಿ ಹೌರಾ ಜಿಲ್ಲಾ ಘಟಕ ಶನಿವಾರ ಇಶ್ರತ್‌ ಅವರನ್ನು ‍ಶನಿವಾರ ಪಕ್ಷಕ್ಕೆ ಬರ ಮಾಡಿಕೊಂಡಿದೆ.

2014ರಲ್ಲಿ ಇಶ್ರತ್‌ ಅವರ ಪತಿ ದುಬೈನಿಂದ ದೂರವಾಣಿಯಲ್ಲಿ ‘ತಲಾಖ್‌’ ಎಂದು ಮೂರು ಬಾರಿ ಹೇಳಿ ಅವರಿಗೆ ವಿಚ್ಛೇದನ ನೀಡಿದ್ದರು.

ADVERTISEMENT

‘ಇಶ್ರತ್‌ ಅವರನ್ನು ಪಕ್ಷಕ್ಕೆ ಸ್ವಾಗತಿಸಲು ಶೀಘ್ರ ರಾಜ್ಯ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸಯಂತನ್‌ ಬಸು ಹೇಳಿದ್ದಾರೆ.

ಉಲುಬೇರಿಯಾ ಲೋಕಸಭಾ ಕ್ಷೇತ್ರಕ್ಕೆ ಜನವರಿ 29ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಅವರು ಪಕ್ಷದ ಅಭ್ಯರ್ಥಿಯಾಗಲಿದ್ದಾರೆಯೇ ಎಂಬ ಪ್ರಶ್ನೆಗೆ ಬಸು ಉತ್ತರಿಸಲಿಲ್ಲ.

ಈ ಚುನಾವಣೆಗಾಗಿ ತೃಣಮೂಲ ಕಾಂಗ್ರೆಸ್‌ ಮತ್ತು ಸಿಪಿಎಂ ತಮ್ಮ ಅಭ್ಯರ್ಥಿಗಳ ಹೆಸರನ್ನು ಈಗಾಗಲೇ ಪ್ರಕಟಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.