ಇಟಾನಗರ/ನವದೆಹಲಿ: ಚೀನಾದ ರಸ್ತೆ ನಿರ್ಮಿಸುವ ತಂಡವೊಂದು ಭಾರತದ ಗಡಿಯಲ್ಲಿ ಒಂದು ಕಿಲೋ ಮೀಟರ್ ಒಳಗೆ ಕಳೆದ ವಾರ ಪ್ರವೇಶಿಸಿತ್ತು ಎಂದು ಮೂಲಗಳು ತಿಳಿಸಿವೆ.
ಅರುಣಾಚಲ ಪ್ರದೇಶದ ಟ್ಯೂಟಿಂಗ್‌ನಲ್ಲಿ ರಸ್ತೆ ಮಾರ್ಗ ಗುರುತಿಸುವ ಕಾರ್ಯಕ್ಕೆ ಕೆಲವು ನಾಗರಿಕರನ್ನು ಒಳಗೊಂಡ ಚೀನಾ ತಂಡ ಪ್ರವೇಶಿಸಿತ್ತು. ಈ ತಂಡದಲ್ಲಿ ಸಮವಸ್ತ್ರ ಧರಿಸಿದ್ದ ಸೈನಿಕರು ಸಹ ಇದ್ದರು. ಭಾರತೀಯ ಪಡೆಗಳು ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಈ ತಂಡ ಹಿಂತಿರುಗಿತು. ರಸ್ತೆ ನಿರ್ಮಾಣಕ್ಕೆ ಬೇಕಾಗುವ ಉಪಕರಣಗಳನ್ನು ಬಿಟ್ಟು ತೆರಳಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.