ADVERTISEMENT

ತಮಿಳುನಾಡಿನ 13 ಮೀನುಗಾರರ ಬಂಧನ

ಪಿಟಿಐ
Published 4 ಜನವರಿ 2018, 19:30 IST
Last Updated 4 ಜನವರಿ 2018, 19:30 IST

ರಾಮೇಶ್ವರ: ಕಚತೀವು ದ್ವೀಪ ಬಳಿ ಮೀನುಗಾರಿಕೆ ಮಾಡುತ್ತಿದ್ದ ತಮಿಳುನಾಡಿನ 13 ಮಂದಿ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದ್ದು, ಹಲವು ದೋಣಿಗಳು ಹಾಗೂ ಬಲೆಗಳಿಗೆ ಹಾನಿ ಉಂಟು ಮಾಡಿದೆ.

ತಂಗಾಚಿಮದಾಮ ಪ್ರದೇಶದಿಂದ 523 ದೋಣಿಗಳಲ್ಲಿ ಬುಧವಾರ ಹೋಗಿದ್ದ 2,000 ಮೀನುಗಾರರು ಕಚತೀವು ಬಳಿ ಮೀನುಗಾರಿಕೆ ಮಾಡುತ್ತಿದ್ದರು. ಅವರಲ್ಲಿ 13 ಮಂದಿಯನ್ನು ಲಂಕಾ ನೌಕಾಪಡೆ ಬಂಧಿಸಿದೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡಿನ ಮೀನುಗಾರರನ್ನು ಬೆನ್ನಟ್ಟಿದ ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿ, ಬಲೆಗಳಿಗೆ ಹಾನಿ ಮಾಡಿದ್ದು, ಕಬ್ಬಿಣದ ಸಲಾಕೆಯಿಂದ ಹೊಡೆದು ದೋಣಿಗಳನ್ನು ಒಡೆದುಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.