ADVERTISEMENT

ದೈಹಿಕ, ಮಾನಸಿಕ ನ್ಯೂನತೆಯ ಮುಸ್ಲಿಮರಿಗೂ ಹಜ್‌ ಅವಕಾಶ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 19:49 IST
Last Updated 7 ಜನವರಿ 2018, 19:49 IST
ದೈಹಿಕ, ಮಾನಸಿಕ ನ್ಯೂನತೆಯ ಮುಸ್ಲಿಮರಿಗೂ ಹಜ್‌ ಅವಕಾಶ
ದೈಹಿಕ, ಮಾನಸಿಕ ನ್ಯೂನತೆಯ ಮುಸ್ಲಿಮರಿಗೂ ಹಜ್‌ ಅವಕಾಶ   

ನವದೆಹಲಿ: ದೈಹಿಕ ಮತ್ತು ಮಾನಸಿಕ ನ್ಯೂನತೆಯುಳ್ಳ ಮುಸ್ಲಿಮರ ಹಜ್‌ ಯಾತ್ರೆಯ ಕನಸು ಶೀಘ್ರದಲ್ಲಿಯೇ ನನಸಾಗಲಿದೆ.

ನ್ಯೂನತೆಯುಳ್ಳವರ ಹಜ್‌ ಯಾತ್ರೆಗೆ ಅಡ್ಡಿಯಾಗಿದ್ದ ದಶಕಗಳಷ್ಟು ಹಳೆಯ ನಿರ್ಬಂಧವನ್ನು ಕೇಂದ್ರ ಸರ್ಕಾರ ತೆಗದು ಹಾಕಿದೆ.

ಹಜ್‌ ಸಮಿತಿಯ ನಿಯಮಾವಳಿ ಅನ್ವಯ ಇಲ್ಲಿಯವರೆಗೆ ಇಂತಹ ವ್ಯಕ್ತಿಗಳು ಹಜ್‌ ಯಾತ್ರೆ ಕೈಗೊಳ್ಳಲು ಅವಕಾಶ ಇರಲಿಲ್ಲ.

ADVERTISEMENT

ಇನ್ನು ಮುಂದೆ ಇಂಥವರು ಹಜ್‌ ಯಾತ್ರೆಗೆ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸುವಂತೆ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಹಜ್‌ ಸಮಿತಿಗೆ ಸೂಚಿಸಿದೆ.

ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ನಿಯೋಗ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್‌ ಅಬ್ಬಾಸ್‌ ನಕ್ವಿ ಅವರನ್ನು ಇತ್ತೀಚೆಗೆ ಭೇಟಿಯಾಗಿ ಮನವಿ ಸಲ್ಲಿಸಿತ್ತು.

ದೈಹಿಕ ಅಥವಾ ಮಾನಸಿಕ ನ್ಯೂನತೆಗಾಗಿ ವ್ಯಕ್ತಿಗಳ ಯಾತ್ರೆಯ ಹಕ್ಕನ್ನು ಮೊಟಕುಗೊಳಿಸಬಾರದು ಎಂದು ನಿಯೋಗ ಮನವಿ ಮಾಡಿತ್ತು.

ಪುರುಷ ಸಂಗಾತಿ ಇಲ್ಲದೆ ಮುಸ್ಲಿಂ ಮಹಿಳೆಯರು ಹಜ್‌ ಯಾತ್ರೆ ಕೈಗೊಳ್ಳುವಂತಿರಲಿಲ್ಲ. ಈ ನಿರ್ಬಂಧವನ್ನೂ ಕೇಂದ್ರ ಇತ್ತೀಚೆಗೆ ತೆಗೆದು ಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.