ADVERTISEMENT

‘ಗಾಂಧೀಜಿ ಹತ್ಯೆ: ಮರು ತನಿಖೆ ಬೇಕಿಲ್ಲ’

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 19:30 IST
Last Updated 8 ಜನವರಿ 2018, 19:30 IST
‘ಗಾಂಧೀಜಿ ಹತ್ಯೆ: ಮರು ತನಿಖೆ ಬೇಕಿಲ್ಲ’
‘ಗಾಂಧೀಜಿ ಹತ್ಯೆ: ಮರು ತನಿಖೆ ಬೇಕಿಲ್ಲ’   

ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹತ್ಯೆ ಪ್ರಕರಣದ ಮರು ತನಿಖೆ ಅಗತ್ಯವಿಲ್ಲ ಎಂದು ನ್ಯಾಯಾಲಯದ ಸಹಾಯಕ (ಅಮಿಕಸ್‌ ಕ್ಯೂರಿ) ಅಮರೇಂದ್ರ ಶರಣ್‌ ಅವರು ಸುಪ್ರೀಂ ಕೋರ್ಟ್‌ಗೆ ಹೇಳಿದ್ದಾರೆ.

ಹತ್ಯೆಯ ಹಿಂದಿನ ಪಿತೂರಿ ಮತ್ತು ಗಾಂಧೀಜಿ ಅವರಿಗೆ ನಾಥೂರಾಮ್‌ ಗೋಡ್ಸೆಯೇ ಗುಂಡಿಕ್ಕಿದ್ದಾನೆ ಎಂಬುದು ಈಗಾಗಲೇ ಸ್ಪಷ್ಟವಾಗಿರುವುದರಿಂದ ಮರುತನಿಖೆ ಬೇಡ ಎಂದಿದ್ದಾರೆ.

ಈ ಪ್ರಕರಣದಲ್ಲಿ ತನಗೆ ನೆರವಾಗುವುದಕ್ಕಾಗಿ ಹಿರಿಯ ವಕೀಲರಾದ ಶರಣ್‌ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ಸುಪ್ರೀಂ ಕೋರ್ಟ್‌ ನೇಮಿಸಿತ್ತು.

ADVERTISEMENT

ಗಾಂಧಿ ಹತ್ಯೆ ವೇಳೆ ‘ಫೋರ್ಸ್‌136’ ಹೆಸರಿನ ಬ್ರಿಟನ್ನಿನ ಗುಪ್ತಚರ ಘಟಕ ಅಸ್ತಿತ್ವದಲ್ಲಿತ್ತು ಮತ್ತು ಹತ್ಯೆಯಲ್ಲಿ ಅದರ ಪಾತ್ರವಿತ್ತು ಎಂಬ ಆರೋಪ‍ಗಳಿಗೆ ಪುರಾವೆಗಳಿಲ್ಲ ಎಂದು ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.