ADVERTISEMENT

ಕಾವೇರಿ: ನಾಲ್ಕು ವಾರದೊಳಗೆ ‘ಸುಪ್ರೀಂ’ ತೀರ್ಪು

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಇಂಗಿತ

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 19:51 IST
Last Updated 9 ಜನವರಿ 2018, 19:51 IST
ಕಾವೇರಿ: ನಾಲ್ಕು ವಾರದೊಳಗೆ ‘ಸುಪ್ರೀಂ’ ತೀರ್ಪು
ಕಾವೇರಿ: ನಾಲ್ಕು ವಾರದೊಳಗೆ ‘ಸುಪ್ರೀಂ’ ತೀರ್ಪು   

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದ ತೀರ್ಪನ್ನು ನಾಲ್ಕು ವಾರದೊಳಗೆ ಪ್ರಕಟಿಸುವುದಾಗಿ ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

ಬೆಂಗಳೂರು ನಗರ ಹಾಗೂ ಕಾವೇರಿ ಜಲಾನಯನ ಪ್ರದೇಶ ಒಳಗೊಂಡಿರುವ ಇತರ ಜಿಲ್ಲೆಗಳ ಕುಡಿಯುವ ನೀರಿನ ಅಗತ್ಯವನ್ನು ಪ್ರಮುಖವಾಗಿ ಪರಿಗಣಿಸುವಂತೆ  ಸಲ್ಲಿಕೆಯಾಗಿದ್ದ ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಪೀಠ ನಿರಾಕರಿಸಿದೆ.

ಕಾವೇರಿ ಜಲವಿವಾದ ನ್ಯಾಯಮಂಡಳಿಯು 2007ರಲ್ಲಿ ನೀಡಿರುವ ಐ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಸರ್ಕಾರಗಳು ಸಲ್ಲಿಸಿರುವ ವಿಶೇಷ ಮೇಲ್ಮನವಿಯ ಸುದೀರ್ಘ ವಿಚಾರಣೆ ನಡೆಸಿರುವ ನ್ಯಾಯಪೀಠ, ಕಳೆದ ಸೆಪ್ಟೆಂಬರ್‌ 20ರಂದು ತೀರ್ಪನ್ನು ಕಾದಿರಿಸಿದೆ.

ADVERTISEMENT

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಬ್ರಿಟಿಷ್‌ ಆಡಳಿತ ಮತ್ತು ಮೈಸೂರು ಅರಸರ ನಡುವೆ ನಡೆದ ಒಪ್ಪಂದಗಳ ಅನ್ವಯವೇ ನ್ಯಾಯಮಂಡಳಿಯು ನೀರನ್ನು ಹಂಚಿಕೆ ಮಾಡಿದೆ ಎಂದು ದೂರಿರುವ ಕರ್ನಾಟಕ, ಅನ್ಯಾಯ ಸರಿಪಡಿಸುವಂತೆ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.